ಭಾನುವಾರ, ಏಪ್ರಿಲ್ 13, 2025

ಲವ್ ಇಸ್ ಬ್ಲೈಂಡ್, Is it True..?

  ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಇಂಗ್ಲೀಷ್ ನಲ್ಲಿ ಒಂದು ಹಳೆಯ ವಾಕ್ಯವಿದೆ, Love is Blind ಎಂದು. ಇದರರ್ಥ ಪ್ರೀತಿ, ಪ್ರೇಮದಲ್ಲಿ ಬಿದ್ದವರಿಗೆ ಪ್ರಪಂಚವೇ ಕುರುಡಾಗಿ ಕಾಣುತ್ತದೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಇಂದು ಕೆಲವರು ತೆಗೆದುಕೊಳ್ಳುವ ತೀರ್ಮಾನಗಳು ಹಾಗೂ ಅವರ ವರ್ತನೆ ನೋಡಿದರೆ ಅದು ಸತ್ಯವೇನೋ ಅಂತಾ ಅನ್ನಿಸದೇ ಇರಲಾರದು.

ಗಮನಾರ್ಹ ಅಂಶವೆಂದರೆ ಹಲವರು ಕೇವಲ ಫ್ಯಾಶನ್ ಗಾಗಿ ಪ್ರೀತಿಸುವುದು ಹಾಗೂ ಟೈಂ ಪಾಸ್ ಗಾಗಿ ಪ್ರೀತಿ ಎಂಬ ಕಪಟ ನಾಟಕ ಮಾಡುವುದು ಪ್ರಪಂಚಕ್ಕೆ ತಿಳಿದ ಸತ್ಯ. ಹಾಗೆಯೇ ಮನಸ್ಸಿನಲ್ಲಿ ಕಾಮದ ದುರುದ್ದೇಶವಿಟ್ಟುಕೊಂಡು ಪ್ರೀತಿ ಎಂದು ಸುತ್ತಾಡುವವರ ಸಂಖ್ಯೆಯು ಹೇರಳವಾಗಿದೆ. ಇನ್ನೂ ಪ್ರೀತಿ, ಪ್ರೇಮದಲ್ಲಿ ಫೇಲ್ ಆದವರು, ಜೀವನದಲ್ಲೇ ಸೋತೆವೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಕಡಿಮೆಯೇನಿಲ್ಲ. ಇಂತಹ ವರದಿಗಳು ಪ್ರತಿನಿತ್ಯವು ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟವಾಗುತ್ತಲೇ ಇರುತ್ತದೆ.

ಹಾಗೆ ನೋಡಿದರೆ ಬಹುತೇಕರಿಗೆ ಅದು ಕಾಲೇಜೋ, ಆಫೀಸೋ ಅಥವಾ ಎಲ್ಲೋ ಒಂದು ಜಾಗದಲ್ಲಿ ಹುಡುಗನಿಗೆ ಹುಡುಗಿಯ ಮೇಲೆ ಹಾಗೂ ಹುಡುಗಿಗೇ ಹುಡುಗನ ಮೇಲೆ ಕ್ರಷ್ ಹಾಗೂ ಪ್ರೀತಿ, ಪ್ರೇಮ ಎಂಬ ಭಾವನೆ ಬಂದು ಹೋಗಿರುತ್ತದೆ. ಅದು ಕೆಲವರು ಹೇಳಬಹುದು, ಕೆಲವರು ಪ್ರಸ್ತಾಪಿಸದೆ ಇರಬಹುದು. ಅದು ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ, ಅದು ತಪ್ಪೆಂದು ಹೇಳಲು ಸಾಧ್ಯವಿಲ್ಲ.

ಆದರೆ ಕೆಲವರ ಪ್ರೀತಿ ಹಲವು ಕಾರಣಗಳಿಗಾಗಿ ಅರ್ಧಕ್ಕೆ ನಿಂತು ಹೋಗಿರುತ್ತದೆ, ಮತ್ತೆ ಕೆಲವರದ್ದು ಕೊನೆಯವರೆಗೂ ಸಾಗಿ ಪರಿಪೂರ್ಣ ಜೀವನದತ್ತ ಸಾಗಿರುತ್ತದೆ. ಮತ್ತೆ ಕೆಲವರಂತೂ ಈ ಪ್ರೀತಿ, ಪ್ರೇಮಕ್ಕಾಗಿ ಅಮೂಲ್ಯವಾದ ಶಿಕ್ಷಣ, ಉದ್ಯೋಗ, ಕುಟುಂಬ, ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ ಎಂಬುವುದು ಕೂಡ ಅಷ್ಟೇ ನಿಜ. 

ಮೊನ್ನೆ ನಮ್ಮ ಸ್ನೇಹಿತ ಅರವಿಂದ್ ಎಂಬುವವರು ತಮ್ಮ ಊರಿನ ಜಾತ್ರಾ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಅವರ ಆಹ್ವಾನಕ್ಕೆ ಗೌರವ ಕೊಟ್ಟು ಅವರ ಊರಿಗೆ ಹೋಗಿದ್ದೆ. ಅವರ ಗ್ರಾಮದಲ್ಲಿ ಹಲವು ವರ್ಷಗಳ ಇತಿಹಾಸವಿರುವ ಪುರಾತನ ಕಾಲದ ಈಶ್ವರ ದೇಗುಲವಿದೆ. ಪ್ರತಿವರ್ಷವು ವಿಜೃಂಭಣೆಯಿಂದ ಜಾತ್ರೆ ಹಾಗೂ ದೇವರ ರಥೋತ್ಸವ ನಡೆಯುತ್ತದೆ.

ಜಾತ್ರೆಯ ದಿನದಂದು ಗ್ರಾಮದಲ್ಲಿ ಓಡಾಡುವುದೇ ಏನೋ ಒಂಥರ ಸಂತೋಷ. ನಾನು, ನನ್ನ ಸ್ನೇಹಿತ ದೇವರ ದರ್ಶನದ ನಂತರ ದೇಗುಲದ ಆವರಣದಲ್ಲಿದ್ದ ವಿಶಾಲವಾದ ಜಾಗದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡೆವು. ಆಗ ನನ್ನ ಸ್ನೇಹಿತ ತನ್ನ ಕುಟುಂಬದ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತ ಬಂದ.

ಆತನ ಕಿರಿಯ ಸಹೋದರ ಕಳೆದ 6 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದನಂತೆ. ಅಂತಿಮ ವರ್ಷದ ಬಿ.ಕಾಂ ಪದವಿ ಓದುತ್ತಿದ್ದ ಆತ, ತನ್ನ ಕಾಲೇಜಿನ ಸಹಪಾಠಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಆದರೆ ಮದುವೆಗೆ ಪೋಷಕರ ವಿರೋಧವಿತ್ತು. ಇದರಿಂದ ಆತ ಬೇಸರ ಮಾಡಿಕೊಂಡು ಆತ್ಮಹತ್ಯೆಯಂತಹ ಗಂಭೀರ ನಿರ್ಧಾರ ಕೈಗೊಂಡು, ನಮ್ಮ ಕುಟುಂಬಕ್ಕೆ ದುಃಖ ಬಿಟ್ಟು ಹೋಗಿದ್ದಾನೆ ಎಂದು ಹೇಳುವಾಗ ಸ್ನೇಹಿತ ಅರವಿಂದನ ಕಣ್ಣುಗಳಲ್ಲಿ ಕಣ್ಣೀರು ತಾನಾಗಿಯೇ ಬಂತು.

ನನ್ನ ಸಹೋದರ ಪದವಿ ಮುಗಿಸಿ, ಕೆಲಸಕ್ಕೆ ಸೇರಿಕೊಂಡು ಜೀವನ ನಿರ್ವಹಣೆ ಮಾಡುವ ಶಕ್ತಿ ಸಂಪಾದಿಸಲಿ ಎಂದು ಎರಡು ಕುಟುಂಬದವರು ಮದುವೆಗೆ ನಿರಾಕರಿಸಿದ್ದು ಹೊರತು ಬೇರೆ ಯಾವುದೇ ಉದ್ದೇಶವಿರಲಿಲ್ಲ. ಕನಿಷ್ಠ ಪದವಿ ಮುಗಿಸು, ನಂತರ ನಾನೇ ಎರಡು ಕುಟುಂಬದವರನ್ನು ಒಪ್ಪಿಸಿ ಮುಂದೆ ನಿಂತು, ಮದುವೆ ಮಾಡಿಸುತ್ತೇನೆ. ಆ ನಂತರ ಬೇಕಾದರೆ ನಾನು ಮದುವೆ ಮಾಡಿಕೊಳ್ಳುತ್ತೇನೆ, ಇದರಿಂದ ನನಗಾಗುವ ನಷ್ಟವೇನಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರು, ಆತ ಅರ್ಥ ಮಾಡಿಕೊಳ್ಳದೇ ಆತ್ಮಹತ್ಯೆ ಮಾಡಿಕೊಂಡು ನಮ್ಮನ್ನೆಲ್ಲ ಅನಾಥವಾಗಿ ಬಿಟ್ಟು ಹೋದ ಎಂದು ತನ್ನ ನೋವನ್ನು ತೋಡಿಕೊಂಡ.

ಆತ ನಮ್ಮ ಕುಟುಂಬದ ಕಿರಿಯ ಮಗನಾಗಿದ್ದರಿಂದ ನಮ್ಮ ತಂದೆ, ತಾಯಿಗೆ ಆತನ ಬಗ್ಗೆ ಎಲ್ಲಿಲ್ಲದ ಅಪಾರ ಪ್ರೀತಿ. ನಮ್ಮ ತಾಯಿಗಂತು ಆತ ಎಂದರೆ ಪಂಚ ಪ್ರಾಣ. ಅವನು ನಮ್ಮನ್ನು ಬಿಟ್ಟು ಹೋದ ದಿನದಿಂದ ತಾಯಿಯ ಆರೋಗ್ಯ ಸಂಪೂರ್ಣ ಹದೆಗೆಟ್ಟಿದ್ದು, ಇಲ್ಲಿಯವರೆಗೂ ಸುಧಾರಿಸಿಲ್ಲ ಎಂದು ತನ್ನ ಅಳಲನ್ನು ವ್ಯಕ್ತಪಡಿಸಿದ.

ಇನ್ನೊಂದು ಘಟನೆ ಹೇಳುತ್ತೇನೆ, ನನಗೆ ಪರಮೇಶ್ ಎಂಬ ಹಿರಿಯ ಸ್ನೇಹಿತರೊಬ್ಬರಿದ್ದರು. ವೃತ್ತಿಯಲ್ಲಿ ವ್ಯಾಪಾರಸ್ಥರು ಜೊತೆಗೆ ಸಭ್ಯರು ಹಾಗೂ ಆರ್ಥಿಕ ಶಕ್ತಿವಂತರು. ಅವರಿಗೆ ಒಬ್ಬಳೇ ಮಗಳು. ಆಕೆಯ ವಯಸ್ಸು 20 ವರ್ಷವಿರಬಹುದು. ಕಾಲೇಜಿನಲ್ಲಿ ಓದುವಾಗ ಪರಿಚಯವಾದ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಇವರ ಪ್ರೀತಿಗೆ ಪ್ರಾರಂಭದಲ್ಲಿ ಹುಡುಗಿ ತಂದೆ ಒಪ್ಪಿರುವುದಿಲ್ಲ.

ಕಾರಣ ಮಗಳು ಪ್ರೀತಿಸಿದ ಹುಡುಗ ಕಾಲೇಜನ್ನು ಅರ್ಧಕ್ಕೆ ಬಿಟ್ಟು, ಸ್ನೇಹಿತರ ಸಹವಾಸ ಮಾಡಿಕೊಂಡು ದುರಾಭ್ಯಾಸಗಳಿಗೆ ದಾಸನಾಗಿದ್ದ. ಈ ವಿಷಯ ತಿಳಿದ ಪರಮೇಶ್ ಅವರು ತಮ್ಮ ಮಗಳನ್ನು ಯಾವುದೇ ಕಾರಣಕ್ಕೂ ಆ ಹುಡುಗನಿಗೆ ಮದುವೆ ಮಾಡಿಕೊಡಲು ಸುತಾರಂ ಇಷ್ಟವಿರಲಿಲ್ಲ. ಆದರೆ ಮಗಳ ಹಠದ ಮುಂದೆ ತಂದೆ ತಲೆ ತಗ್ಗಿಸಿ, ವಿಧಿಯಿಲ್ಲದೇ ಇದ್ದ ಒಬ್ಬಳೇ ಮಗಳನ್ನು ಆಕೆ ಪ್ರೀತಿಸಿದ ಹುಡುಗನಿಗೆ ಕೊಟ್ಟು ಮದುವೆ ಮಾಡಿಕೊಡುತ್ತಾರೆ. ಒಬ್ಬಳೇ ಮಗಳಾದ್ದರಿಂದ ಅವರಿಗೆ ಇಷ್ಟವಿಲ್ಲದಿದ್ದರು, ಮದುವೆಯ ಸಂಪೂರ್ಣ ಖರ್ಚನ್ನು ಇವರೇ ಭರಿಸಿ, ವಿಜೃಂಭಣೆಯಿಂದ ಮದುವೆ ಮಾಡಿ, ಹುಡುಗನಿಗೆ ವರದಕ್ಷಿಣೆಯಾಗಿ ಬಂಗಾರ ಸೇರಿದಂತೆ ಮತ್ತಿತರ ವಸ್ತುಗಳನ್ನು ಕೂಡ ನೀಡುತ್ತಾರೆ.

ವಿಪರ್ಯಾಸವೆಂದರೆ ಮದುವೆಯಾದ 6 ತಿಂಗಳಿಗೆ ಆ ಹುಡುಗಿ ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡು ಬಲಿಯಾಗುತ್ತಾಳೆ. ಮೊದಲೇ ದುರಾಭ್ಯಾಸಗಳಿಗೆ ದಾಸನಾಗಿದ್ದ ಆತ, ಸರಿಯಾಗಿ ಕೆಲಸಕ್ಕೆ ಹೋಗದೆ ಪ್ರತಿದಿನವು ಕುಡಿದು, ಕುಡಿದು ಆ ಹುಡುಗಿಗೇ ಚಿತ್ರ ಹಿಂಸೆ ಕೊಟ್ಟು, ವರದಕ್ಷಿಣೆ ದಾಹಕ್ಕೆ ಆಕೆಯನ್ನೇ ಬಲಿ ತೆಗೆದುಕೊಳ್ಳುತ್ತಾನೆ.

ಇದರಿಂದ ಕಷ್ಟ ಬಿದ್ದು 20 ವರ್ಷ ಬೆಳೆಸಿದ ಮಗಳನ್ನು ಕಣ್ಣೆದುರೆ ಕಳೆದುಕೊಂಡ ಪರಮೇಶ್ ಅವರ ನೋವು, ಕಷ್ಟ ವಿವರಿಸಲು ಅಸಾಧ್ಯ. ಅವರು ಜೀವಂತವಾಗಿ ಬದುಕಿದ್ದರು, ಪ್ರತಿಕ್ಷಣವೂ ಮಗಳ ನೆನಪಿನಲ್ಲೇ ಕಣ್ಣೀರು ಹಾಕುತ್ತ ಬದುಕಲು ಇಷ್ಟವಿಲ್ಲದಿದ್ದರೂ ಜೀವನ ಸಾಗಿಸುತ್ತಿದ್ದಾರೆ ಅಷ್ಟೇ.

ಇನ್ನೊಂದು ಘಟನೆ ಹೇಳುತ್ತೇನೆ, ಸಾಗರ್ ಎಂಬ ಯುವ ಸಹಾಯಕ ಪ್ರಾಧ್ಯಾಪಕರೊಬ್ಬರು ನನಗೆ ತುಂಬಾ ಪರಿಚಿತರು. ಗಣಿತ ವಿಷಯಲ್ಲಿ ಎಂ.ಎಸ್ಸಿ, ಬಿ.ಎಡ್ ಮಾಡಿ ಈಗ ಸರ್ಕಾರಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಗರ್ ಅವರದ್ದು ತುಂಬಾ ಬಡತನ ಕುಟುಂಬ. ಅದೆಷ್ಟರ ಮಟ್ಟಿಗೆ ಎಂದರೆ ತಿನ್ನಲು ಊಟ ಕೂಡ ಸಿಗದ ಪರಿಸ್ಥಿತಿ. ಇವರಿಗೆ 4 ವರ್ಷವಿರುವಾಗಲೇ ಅನಾರೋಗ್ಯದಿಂದ ತಂದೆ ವಿಧಿವಶರಾಗುತ್ತಾರೆ. ತಾಯಿಯೇ ಕೂಲಿ ಮಾಡಿ ಅವರನ್ನು ಬೆಳೆಸಿದ್ದು, ಓದಿಸಿದ್ದು. ಅವರಿಗೆ ಈ ಪ್ರೀತಿ, ಪ್ರೇಮ ಎಂಬ ವಿಷಯಗಳ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಜೀವನ ನಡೆಸುವುದಕ್ಕೆ ಕಷ್ಟವಿದ್ದರಿಂದ ಪ್ರೀತಿ ಪ್ರೇಮ ಸಮೀಪವು ಹೋಗಿರುವುದಿಲ್ಲ. ಆದರೆ ಎಂ.ಎಸ್ಸಿ ಓದುವಾಗ ಕಾಲೇಜಿನಲ್ಲಿ ಮಹಿಳಾ ಸ್ನೇಹಿತರೊಬ್ಬರು ಪರಿಚಯವಾಗುತ್ತದೆ. ಇಬ್ಬರು ಓದುವುದರಲ್ಲಿ ಬ್ರಿಲಿಯೆಂಟ್, ಇಬ್ಬರ ವ್ಯಕ್ತಿತ್ವಗಳು ಪರಸ್ಪರ ಹೋಲಿಕೆಯಾಗುತ್ತಿದ್ದರಿಂದ ಅವರಿಗೆ ಗೊತ್ತಿಲ್ಲದೆಯೇ ಸ್ನೇಹವು ಬರುತ್ತಾ ಪ್ರೀತಿಯಾಗಿ ಪರಿರ್ವತನೆಯಾಗುತ್ತದೆ. 4 ವರ್ಷಗಳು ಇಬ್ಬರೂ ಪ್ರೀತಿಯಲ್ಲಿ ಸಾಗುತ್ತಾರೆ.

ಆದರೆ ಅವರು ಪ್ರೀತಿಸುತ್ತಿದ್ದವರ ತಂದೆ ತಾಲ್ಲೂಕಿನ ಪ್ರಭಾವಿ ರಾಜಕಾರಣಿಗಳು ಹಾಗೂ ಆರ್ಥಿಕವಾಗಿ ತುಂಬಾ ಬಲಾಢ್ಯರು. ತುಂಬಾ ಕಡು ಬಡವರಾಗಿರುವ ಸಾಗರ್ ಅವರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿಕೊಡಲು ಇಷ್ಟವಿಲ್ಲದೇ, ಸಾಗರ್ ಅವರಿಗೆ ಬೆದರಿಕೆ ಹಾಕಿ, ಕಿರುಕುಳ ನೀಡಿ ದೂರ ಮಾಡುತ್ತಾರೆ.

ಈ ಮಧ್ಯೆ ಸಾಗರ್ ರವರಿಗೆ ತಮ್ಮ ನಾಲ್ಕು ವರ್ಷಗಳ ಪ್ರೀತಿ ಮರೆಯಲು ಅಷ್ಟು ಸುಲಭವಾಗಿರಲಿಲ್ಲ. ಹಲವು ವರ್ಷಗಳ ಕಾಲ ನೋವು, ವೇದನೆ ಪಟ್ಟುಕೊಳ್ಳುತ್ತಾರೆ. ಆದರೆ ಅವರಿಗೆ ಬೇರೆ ಯಾವುದೇ ಮಾರ್ಗವಿರುವುದಿಲ್ಲ. ಈ ಮಧ್ಯೆ ಸಾಗರ್ ಅವರು ತಮ್ಮ ಪ್ರೇಮಿಯನ್ನು ಮರೆಯಲು ಸಾಧ್ಯವಾಗದೇ ಆತ್ಮಹತ್ಯೆ ಹಾದಿಯನ್ನು ಹಿಡಿಯಲು ಹೋದಾಗ ಅವರ ಕಣ್ಣೆದುರಿಗೆ ಬಂದಿದ್ದು, ಅವರ ತಾಯಿ. ಇರುವ ಒಬ್ಬನೇ ಮಗ ಎಂದು ನನ್ನನ್ನು ಬಿಸಿಲಲ್ಲಿ ದುಡಿದು, ಕೂಲಿ ಮಾಡಿ ಸಾಕಿದ ತಾಯಿಯನ್ನು ಬಿಟ್ಟು ಹೋಗುವುದು ನ್ಯಾಯವೇ ಎಂಬ ಆಲೋಚನೆ ಮನಸ್ಸಲ್ಲಿ ಬರುತ್ತದೆ. ಕೂಲಿ ಮಾಡಿ ಇಷ್ಟು ವರ್ಷ ಓದಿಸಿ, ಜೋಪಾನವಾಗಿ ಬೆಳೆಸಿದ ತಾಯಿಯನ್ನು ಒಬ್ಬಂಟಿಯಾಗಿ ಮಾಡಿ ಹೋಗುವುದು ಸರಿಯಲ್ಲ ಎಂದು ಭಾವಿಸಿ ಆತ್ಮಹತ್ಯೆ ಹಾದಿ ಬಿಟ್ಟು ವಿಶಾಲವಾಗಿ ಆಲೋಚಿಸಲು ಪ್ರಾರಂಭಿಸುತ್ತಾರೆ. ಹುಡುಗಿ ಪ್ರೀತಿ ಹೋದರು ಚಿಂತೆಯಿಲ್ಲ, ಕನಿಷ್ಠ ತಾಯಿ ಪ್ರೀತಿಯಾದರೂ ಸಿಕ್ಕಿದೆ ಅಷ್ಟೇ ನನಗೆ ಸಾಕು ಎಂದು ಭಾವಿಸಿ ತಮ್ಮ ಮನಸ್ಥಿತಿಯನ್ನೇ ಬದಲಿಸಿಕೊಳ್ಳುತ್ತಾರೆ.

ತಮ್ಮ ಶಿಕ್ಷಣವನ್ನು ಮುಂದುವರೆಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈಗ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ, ಸದ್ಯ ನೂರಾರು ವಿದ್ಯಾರ್ಥಿಗಳಿಗೆ ಜೀವನದ ಪಾಠ ಭೋದಿಸುವ ಮಟ್ಟಕ್ಕೆ ಬೆಳೆದಿದ್ದಾರೆ.

ಇವತ್ತಿನ ಯುವ ಸಮೂಹದ ವ್ಯಕ್ತಿತ್ವ ಹೇಗಿದೆಯೆಂದರೆ ಪ್ರೀತಿ ಪ್ರೇಮ ಎಂಬುವುದು ಒಂದು ಫ್ಯಾಶನ್ ಆಗಿದೆ. ಕಾಲೇಜು ಮೆಟ್ಟಿಲು ಹತ್ತುತ್ತಿದ್ದೇವೆ ಎಂದರೆ ಪ್ರೀತಿ, ಪ್ರೇಮ ಎಂಬುವುದಕ್ಕೆ ಜೋತು ಬೀಳಲೇ ಬೇಕೆಂಬ ಅಲಿಖಿತ ನಿಯಮವನ್ನು ಹಲವು ಹುಡುಗ, ಹುಡುಗಿಯರು ಪಾಲಿಸಲು ಹೊರಟಿರುವುದು ಕಣ್ಣಿಗೆ ಕಾಣುವ ವಾಸ್ತವ ಹಾಗೂ ದುರ್ದೈವ.

ಸ್ನೇಹಿತರ ಬಳಿ ಹೇಳಿಕೊಳ್ಳಲು, ವ್ಯಾಲು ಬರುತ್ತದೆ ಎಂದು ಹಾಗೂ ಟೈಂ ಪಾಸ್ ಗಾಗಿ ಪ್ರೀತಿ ಎಂಬ ನಾಟಕವನ್ನು ಮಾಡುವ ಮೈಂಡ್ ಸೆಟ್ ಇರಬಾರದು. ಪ್ರೀತಿ, ಪ್ರೇಮ ಮಾಡುವುದೇ ತಪ್ಪೆಂದು ಅರ್ಥವಲ್ಲ, ಅದು ಅವರವರ ವೈಯಕ್ತಿಕ ನಿರ್ಧಾರಗಳು. ಯಾರೊಬ್ಬರನ್ನು ಯಾರು ಪ್ರಶ್ನಿಸಲು ಸಾಧ್ಯವಿಲ್ಲ.

ಆದರೆ ನಮ್ಮ ಹಣೆಬರಹದಲ್ಲಿ ಪ್ರೀತಿ, ಪ್ರೇಮ ಎಂಬುವುದು ಬರೆದಿದ್ದರೆ ಅದಾಗಲೇ ಆಗಲಿ. ಅದು ಬಿಟ್ಟು ಶಿಕ್ಷಣ, ಜೀವನ ಎಲ್ಲವನ್ನೂ ಮಧ್ಯೆದಲ್ಲೇ ಕೈ ಬಿಟ್ಟು ಯಾರೋ ಒಬ್ಬರನ್ನು ಪ್ರೀತಿ, ಪ್ರೇಮ ಮಾಡಲೇ ಬೇಕೆಂದು ಹಠ ಹಿಡಿದು ನಿರ್ಧರಿಸಿ, ಹಾದಿ ತಪ್ಪುವುದು ಮಾತ್ರ, ನಮ್ಮ ಜೀವನಕ್ಕೆ ನಾವೇ ಬೆಂಕಿ ಇಟ್ಟುಕೊಂಡಂಗೆ.

ನಮ್ಮ ಪ್ರೀತಿಯಲ್ಲಿ ನಿಷ್ಕಲ್ಮಶತೆ, ನೈತಿಕತೆ, ಪರಸ್ಪರ ಅರ್ಥ ಮಾಡಿಕೊಳ್ಳುವ ಗುಣ ಹಾಗೂ ಮೌಲ್ಯಗಳು ಉದಾರವಾಗಿ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕುಟುಂಬದವರು ನಮ್ಮ ಪ್ರೀತಿಯನ್ನು ಒಪ್ಪುವ ಮಟ್ಟಿಗೆ ಅರ್ಥಪೂರ್ಣವಾಗಿ ಇರಬೇಕು ಹಾಗೂ ಯಾರ ಸಹಕಾರವಿಲ್ಲದೇ ಬದುಕಿ ತೋರಿಸುತ್ತೇವೆ ಎಂಬ ನಂಬಿಕೆ ಕುಟುಂಬದವರಿಗೆ ಬರುವ ರೀತಿಯಲ್ಲಿ ಜವಾಬ್ದಾರಿ, ಕರ್ತವ್ಯ ನಿರ್ವಹಿಸಬೇಕು.

ಹಲವು ವರ್ಷ ಪ್ರೀತಿಸಿ ಮದುವೆಯಾದ ಹಲವರು 6 ತಿಂಗಳಿಗೆ ಡೈವೋರ್ಸ್ ಪಡೆಯಲು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ ಎಂದರೆ ಏನರ್ಥ..? ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಹಾದಿ ತಪ್ಪದೇ ಆಯ್ಕೆ ಮಾಡಿಕೊಳ್ಳುವ ಶಕ್ತಿ ನಮಗಿರಬೇಕು. 

ಇನ್ನು ಪ್ರೀತಿ, ಪ್ರೇಮ ಎಂದು ಶಿಕ್ಷಣ, ಜೀವನ, ಕುಟುಂಬವನ್ನು ಬಲಿಪಶು ಮಾಡಿ ಪಡೆದುಕೊಳ್ಳುವುದರಲ್ಲಿ ಏನರ್ಥವಿರುತ್ತದೆ..? ಪ್ರೀತಿ ಪ್ರೇಮದ ಜೊತೆಗೆ ಶಿಕ್ಷಣ, ಉದ್ಯೋಗ, ಕುಟುಂಬ, ಮಾನ, ಮಾರ್ಯಾದೆಯನ್ನು ಕೂಡ ಅತ್ಯಂತ ಅಗತ್ಯ ಎಂಬ ಪರಿಜ್ಞಾನ ಪ್ರತಿಯೊಬ್ಬರಿಗೂ ಇರಬೇಕು. ಎಲ್ಲವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ, ಶಕ್ತಿ ಪ್ರೀತಿಸುವವರಲ್ಲಿ ಇರಲೇ ಬೇಕು.

ಈ ಮಧ್ಯೆ ಪ್ರೀತಿಯಲ್ಲಿ ಸೋತೆ, ಪ್ರೀತಿಸಿದವರನ್ನು ಮದುವೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆತ್ಮಹತ್ಯೆ ದಾರಿ ಹಿಡಿಯುವ ನಿರ್ಧಾರವೇ ಅತ್ಯಂತ ಘೋರ ಹಾಗೂ ಆಘಾತ. ಯಾವುದೋ ಒಂದು ವಿಚಾರಕ್ಕೆ ನಮ್ಮ ಲೈಪ್ ನ್ನೇ ಕೊನೆ ಮಾಡಿಕೊಳ್ಳುತ್ತೇವೆ ಎಂದರೆ ಅದು ಮೂರ್ಖತನದ ಪರಮಾವಧಿಯಲ್ಲದೇ ಮತ್ತೇನು ಅಲ್ಲ. ಪ್ರತಿಯೊಬ್ಬರಿಗೂ ಪ್ರೀತಿಸಿದವರೇ ಸಿಗಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಒಬ್ಬೊಬ್ಬರ ಹಣೆ ಬರಹ ಒಂದೊಂದು ರೀತಿಯಲ್ಲಿ ಇರುತ್ತದೆ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.

ಹುಡುಗ ಅಥವಾ ಹುಡುಗಿ ಪ್ರೀತಿ ಸಿಗದೇ ಇದ್ದರೂ, ತಂದೆ, ತಾಯಿ, ಕುಟುಂಬದವರ ಹಾಗೂ ಸ್ನೇಹಿತರ ಪ್ರೀತಿ ಸಿಕ್ಕಿರುವುದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಲೇಬೇಕು. 

ಜೀವನದಲ್ಲಿ ಯಾವುದೇ ಸಂದರ್ಭಗಳು ಬಂದರೂ, ಅದನ್ನು ಸವಾಲಾಗಿ ಸ್ವೀಕರಿಸುವ ಮಾನಸಿಕತೆ ನಮ್ಮದಾಗಿರಬೇಕು, ಮನಸ್ಸನ್ನು ಗಟ್ಟಿ ಮಾಡಿಕೊಳ್ಳದೇ ಬೇರೆ ದಾರಿ ಏನಿದೆ..? ಕೊನೆಯಾಗಿ ಒಂದು ವಿಚಾರ ಹೇಳುತ್ತೇನೆ, ಪ್ರೀತಿ ಯಾವತ್ತೂ ಕುರುಡಾಗಿಲ್ಲ. ಪ್ರೀತಿಸುವವರು ಮಾತ್ರ ಕುರುಡಾಗಿ ಜೀವಿಸಬಾರದಷ್ಟೆ.

23 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Nice lines sir, but ಈಗಿನ janaration ಯುವಕ/ಯುವತಿಯರಲ್ಲಿ ಪ್ರೀತಿ ಬಗ್ಗೆ ಕುರಡಾಗಿ ತಮ್ಮನ್ನು ಹೆತ್ತು ಸಾಕಿದ ಪೋಷಕರನ್ನೇ ಮರೆತು ಪ್ರೀತಿ ಮಾಡಿದವರಿಗೋಸ್ಕರ ಸಾಯುವುದು ಕುರುಡುತನ ಇದನ್ನು ಬಿಡಬೇಕು

ಅನಾಮಧೇಯ ಹೇಳಿದರು...

ಅದ್ಭುತ ವರ್ಣನೆ.. ತುಂಬಾ ಆರ್ಥಪೂರ್ಣವಾಗಿದೆ.. 💓👍🏻💐

ಅನಾಮಧೇಯ ಹೇಳಿದರು...

Super sir

ಅನಾಮಧೇಯ ಹೇಳಿದರು...

100% currect sir.very nice thought.

ಅನಾಮಧೇಯ ಹೇಳಿದರು...

Excellent Sirji 👌👍

ಅನಾಮಧೇಯ ಹೇಳಿದರು...

ಗಿರೀಶ್ sir ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಹಿಂತ ಆಲೋಚನೆ ಎಲ್ಲರಲೂ ಬರಬೇಕು ಎಂಬ ಮಾತು ಸತ್ಯ ಕೆಲವು ಆತ್ಮಹತ್ಯೆ ಗಳು ಕಡಿಮೆ ಆಗುತ್ತದೆ ಹಾಗೂ ಜೀವನ ದಲ್ಲಿ ಒಳ್ಳೆಯ ಅಭಿಪ್ರಾಯ ಬರುವುದು ಹಾಗೂ ಪ್ರೀತಿ ಪ್ರೇಮ ಎಂಬ ಹುಚ್ಚರಂತೆ ಕಾಣುವ ಹುಡುಗ ಹುಡುಗಿಯರಿಗೆ ತಂದೆ ತಾಯಿಯ ಕಷ್ಟಾ ಅರ್ಥ ಮಾಡಿಕೊಂಡು ಬದುಕುವ ಸಾಮರ್ಥ್ಯ ಹಾ ದೇವರು ಎಲ್ಲರಿಗೂ ಆಶೀರ್ವದಿಸಲಿ ಎಂದು ಆಶಿಸುತ್ತೇನೆ

ಅನಾಮಧೇಯ ಹೇಳಿದರು...

Super sir

ಅನಾಮಧೇಯ ಹೇಳಿದರು...

Good information 👍

ಅನಾಮಧೇಯ ಹೇಳಿದರು...

100% true sir, nice thought 💐but thise not kaliyuga, thise is Kantri yuga, 😡 y because, which kind of generation is ther in society, 😔

ಅನಾಮಧೇಯ ಹೇಳಿದರು...

ಸೂಪರ್ ಸರ್ ನಿಮ್ಮ ಎಲ್ಲಾ ಲೇಖನ ಗಳು ಈಗಿನ ಪೀಳಿಗೆಗೆ ತುಂಬಾ ಸೂಕ್ತ ಹೀಗಾಗಿ ನಿಮ್ಮ ಲೇಖನ ಗಳು ಇನ್ನು ಹೆಚ್ಚಾಗಿ ಬರಲ್ಲಿ ಸರ್ 🙏

ಅನಾಮಧೇಯ ಹೇಳಿದರು...

Tq for ur valuable words sir I am glad to be a student of such a person ❤️

ಅನಾಮಧೇಯ ಹೇಳಿದರು...

ಈಗಿನ ಕಾಲದಲ್ಲಿ ಮಕ್ಕಳಿಗೆ ತಂದೆ ತಾಯಿ ಹೇಳಲು ಆಗದ ಅದೆಷ್ಟೋ ವಿಚಾರಗಳು ಇದ್ದು ಅದ್ರಲ್ಲೂ ಬಹು ಮುಖ್ಯ ಪ್ರೀತಿಯ ವಿಚಾರದ ಬಗ್ಗೆ ಈ ನಿಮ್ಮ ಮಾಹಿತಿಯನ್ನು ಓದಿದ ಅದೆಷ್ಟೋ ಜನ ತಪ್ಪದೆ ಅರ್ಥ ಮಾಡಿಕೊಂಡು ಮುಂದಿನ ಜೀವನ ಸಾಗಿಸುವಲ್ಲಿ ಯಶಸ್ಸು ಕಂಡುಕೊಳ್ಳುತ್ತಾರೆ... ಈ ನಿಮ್ಮ ಮಾಹಿತಿ ತುಂಬಾ ಅರ್ಥಪೂರ್ಣವಾಗಿದೆ ಸರ್ ಧನ್ಯವಾದಗಳು 🙏🏻🙏🏻🙏🏻🙏🏻

ಅನಾಮಧೇಯ ಹೇಳಿದರು...

ಸೂಪರ್ ಗುರುಗಳೇ 💐💐

ಅನಾಮಧೇಯ ಹೇಳಿದರು...

Ni

ಅನಾಮಧೇಯ ಹೇಳಿದರು...

Nice article sir

ಅನಾಮಧೇಯ ಹೇಳಿದರು...

It's really very meaningful and usefull artical sir

ಅನಾಮಧೇಯ ಹೇಳಿದರು...

ಒಬ್ಬ ತಂದೆಯಾಗಿ ಒಬ್ಬ ತಾಯಿಯಾಗಿ ಗೆಳೆಯನಾಗಿ ಗುರುವಾಗಿ ಕೊಡಬಹುದಾದ ಈಗಿನ ಯುವ ಜನತೆಯ ಹಾಗೂ ಪ್ರೀತಿಯಲ್ಲಿ ಬಿದ್ದವರಿಗೆ ಸೂಕ್ತ ಸರಿ ಮಾರ್ಗ ನೀವು ಈ ಲೇಖನದಲ್ಲಿ ಸ್ವಷ್ಟವಾಗಿಯೂ ಕೊಟ್ಟಿದ್ದೀರಿ ಸರ್.ನಿಮಗೆ ಪ್ರೀತಿಯಾ ಧನ್ಯವಾದಗಳು


ಸುನಿಲ್ ಎಂ ಚಿನ್ನದ ನಾಡಿನ ಹುಡುಗ.

BhagyaLakshmi ಹೇಳಿದರು...

ತುಂಬಾ ಅದ್ಭುತವಾಗಿದೆ ಸರ್
ಈಗಿನ ಕಾಲದ ಜನತೆಗೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಿ ಸರ್ 🤍😌🎀

Bhagyalakshmi ಹೇಳಿದರು...

ತುಂಬಾ ಅದ್ಭುತವಾಗಿದೆ ಸರ್
ಈಗಿನ ಕಾಲದ ಜನತೆಗೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಿ ಸರ್ 🤍😌🎀

ಅನಾಮಧೇಯ ಹೇಳಿದರು...

Hi sir super 👌👌

ಅನಾಮಧೇಯ ಹೇಳಿದರು...

ಸರ್, ಪ್ರೀತಿ ಎಂಬುದು ಪ್ರೇಮಿಗಳಿಗಷ್ಟೇ ಕುರುಡಲ್ಲಾ ಸರ್. . ತಂದೆತಾಯಿಗಳು ಮಕ್ಕಳ ಮೇಲೆ ತೋರುವ ಪ್ರೀತಿಗೆ ಮಮತೆ ವಾತ್ಸಲ್ಯ ಅಂತಾರೆ. ಆದ್ದರಿಂದಲೇ, ಹಾಗೆಯೇ ಜೀವನದಲ್ಲಿ ಸಹಿಸಲಾರದಂತ ಎದುರಿಸಲಾರದಂತ ಎಷ್ಟೇ ಕಷ್ಟ ಬಂದರೂ ಪತಿ ಪತ್ನಿಯರ ಪ್ರೀತಿಗೆ ಪವಿತ್ರವಾದ ಬಂಧನ ಅಂತಾರೆ ಸರ್. ತನ್ನ ಪ್ರೀತಿಗಾಗಿ ಸಾವಿನ ಹಂಚಿಗೂ ಹೋಗಿ ಹೆತ್ತ ಮಕ್ಕಳಿಗಾಗಿ ಜೀವ ಕೊಡುವಂತ ತಂದೆ ತಾಯಿಗಳೂ ಉಂಟು .ಅದೇ ರೀತೀ ತನ್ನ ಕೈ ಹಿಡಿದ ಪತಿಗಾಗೀ ಕೊನೆತನಕ ಹೋರಾಡು ಸತಿಯೂ ಉಂಟು ಸರ್.

ಅನಾಮಧೇಯ ಹೇಳಿದರು...

ನೈಸ್ ಸ್ವೋರೀ ಸರ್👌

ಅನಾಮಧೇಯ ಹೇಳಿದರು...

ಸೂಪರ್ ಸರ್