➤ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ನಿಸರ್ಗವೇ ಹಾಗೆ ಅದರ ಅದ್ಬುತ ಶಕ್ತಿಯನ್ನು ವರ್ಣಿಸಲು ಅಸಾಧ್ಯ. ಅದರ ಸೌಂದರ್ಯವನ್ನು ಹೊಗಳಲು ಪದಗಳೇ ಸಿಗುವುದಿಲ್ಲ, ಅಷ್ಟರ ಮಟ್ಟಿಗೆ ಅದು ನಮ್ಮ ಊಹೆಗೂ ಮಿಗಿಲಾದ ಶಕ್ತಿಯನ್ನು ಪಡೆದಿದೆ. ಮನುಷ್ಯನ ನೋವನ್ನು ಮರೆಸುವ ಶಕ್ತಿ ಯಾವುದಕ್ಕಾದರೂ ಇದೆ ಎಂದರೆ ಅದು ಪ್ರಕೃತಿಗೆ ಮಾತ್ರ.
ನಿಸರ್ಗವೇ ಹಾಗೆ ಅದರ ಅದ್ಬುತ ಶಕ್ತಿಯನ್ನು ವರ್ಣಿಸಲು ಅಸಾಧ್ಯ. ಅದರ ಸೌಂದರ್ಯವನ್ನು ಹೊಗಳಲು ಪದಗಳೇ ಸಿಗುವುದಿಲ್ಲ, ಅಷ್ಟರ ಮಟ್ಟಿಗೆ ಅದು ನಮ್ಮ ಊಹೆಗೂ ಮಿಗಿಲಾದ ಶಕ್ತಿಯನ್ನು ಪಡೆದಿದೆ. ಮನುಷ್ಯನ ನೋವನ್ನು ಮರೆಸುವ ಶಕ್ತಿ ಯಾವುದಕ್ಕಾದರೂ ಇದೆ ಎಂದರೆ ಅದು ಪ್ರಕೃತಿಗೆ ಮಾತ್ರ.
ಮನುಷ್ಯನ ರಕ್ತದ ಕಣಕಣದಲ್ಲೂ ಸ್ವಾರ್ಥ, ದುರಾಸೆ ತುಂಬಿ ತುಳುಕುತ್ತಿದ್ದರೆ ಇತ್ತ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾನವನಿಗೆ ನಿರಂತರವಾಗಿ ಹಲವು ರೀತಿಯಲ್ಲಿ ಸೇವೆ ಮಾಡುವ ಮೂಲಕ ತಾನು ಮಾತೃ ಹೃದಯಿ ಎಂಬುವುದನ್ನು ಪರಿಸರ ಸದಾ ತೋರಿಸಿಕೊಟ್ಟಿದೆ.
ಪರಿಸರದ ರಮಣೀಯ ಸೌಂದರ್ಯವನ್ನು ತನ್ನ ಮಡಲಲ್ಲಿ ಇಟ್ಟುಕೊಂಡು, ಮುಗುಳ್ನಗೆಯಿಂದ ಎಲ್ಲರನ್ನು ತನ್ನತ್ತ ಸೆಳೆಯುವ ಅಪರೂಪದ ಬೆಟ್ಟಗಳೆರೆಡು ಕೋಲಾರ ನಗರದ ಸಮೀಪವಿದೆ.
ಅದ್ಯಾವುದು ಎನ್ನುತ್ತಿರಾ, ಅದೇ ಕೋಲಾರ ನಗರದಿಂದ ಕೂಗಳತೆಯ ದೂರದಲ್ಲಿರುವುದೇ ತೇರಹಳ್ಳಿ ಬೆಟ್ಟ. ವಿಶೇಷವೆಂದರೆ ಈ ಬೆಟ್ಟವು ಕೇವಲ ಕಲ್ಲು, ಬಂಡೆ, ಮಣ್ಣಿನಿಂದ ಕೂಡಿದ ಸಹಜ ಬೆಟ್ಟವಲ್ಲ. ಇದಕ್ಕೆ ತನ್ನದೇ ಆದ ಐತಿಹಾಸಿಕ ಇತಿಹಾಸವಿದೆ.
ಅದ್ಯಾವುದು ಎನ್ನುತ್ತಿರಾ, ಅದೇ ಕೋಲಾರ ನಗರದಿಂದ ಕೂಗಳತೆಯ ದೂರದಲ್ಲಿರುವುದೇ ತೇರಹಳ್ಳಿ ಬೆಟ್ಟ. ವಿಶೇಷವೆಂದರೆ ಈ ಬೆಟ್ಟವು ಕೇವಲ ಕಲ್ಲು, ಬಂಡೆ, ಮಣ್ಣಿನಿಂದ ಕೂಡಿದ ಸಹಜ ಬೆಟ್ಟವಲ್ಲ. ಇದಕ್ಕೆ ತನ್ನದೇ ಆದ ಐತಿಹಾಸಿಕ ಇತಿಹಾಸವಿದೆ.
ಸಮುದ್ರಮಟ್ಟದಿಂದ ಮೇಲ್ಬಾಗದಲ್ಲಿರುವ ತೇರಹಳ್ಳಿ ಬೆಟ್ಟದ ಮೇಲೆ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಒಟ್ಟು 7 ಗ್ರಾಮಗಳಿವೆ. ತೇರಹಳ್ಳಿ, ಕುಪ್ಪಹಳ್ಳಿ, ಶಿವಗಂಗೆ, ಪಾಪರಾಜನಹಳ್ಳಿ, ಕೆಂಚೇಗೌಡನಹಳ್ಳಿ, ಹೊಸಹಳ್ಳಿ, ಬೆಟ್ಟದ ಹೊಸಹಳ್ಳಿ ಎಂಬ ಹಳ್ಳಿಗಳು ಬೆಟ್ಟದ ಮೇಲಿದ್ದು, ಈ ಹಳ್ಳಿಗಳಲ್ಲಿ ಜನರು ವಾಸವಿದ್ದಾರೆ.
ತೇರಹಳ್ಳಿ ಬೆಟ್ಟದ ಮೇಲಿನ ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸುವುದೇ ಆನಂದ, ಬೆಟ್ಟದ ಮೇಲೆ ನಿಂತರೆ ಇಡೀ ಕೋಲಾರ ನಗರವು ಪುಟ್ಟ, ಚೊಕ್ಕದಾಗಿ ಕಾಣುತ್ತದೆ.
ಕೋಲಾರ ಜಿಲ್ಲೆಯ ಎಷ್ಟೋ ಜನರಿಗೆ ತೇರಹಳ್ಳಿ ಬೆಟ್ಟವು ತಮ್ಮ ನೋವನ್ನು ಮರೆಸುವ ಸ್ಥಳ. ಕುಟುಂಬ, ಕಚೇರಿ, ವ್ಯವಹಾರದ ಜಂಜಾಟಗಳಿಂದ ಹೈರಾಣಾಗಿರುವ ಹಲವರಿಗೆ ಮನಸ್ಸಿಗೆ ತುಸು, ನೆಮ್ಮದಿ ನೀಡಿ ಜೀವನೋತ್ಸಾಹ ತುಂಬವ ಪ್ರದೇಶ.
ಇನ್ನು ತೇರಹಳ್ಳಿ ಗ್ರಾಮದಲ್ಲಿ ಅತ್ಯಂತ ಪುರಾತನವಾದ ಶಿವ (ಗವಿಗಂಗಧಾರೇಶ್ವರ) ದೇಗುಲವಿದೆ. ದೇಗುಲ ಮುಂಭಾಗದ ಸ್ವಾಗತ ಗೋಪುರ (ದ್ವಾರ)ದ ಶೈಲಿ ಅದ್ಬುತವಾಗಿದೆ. ದೇಗುಲದ ಆವರಣದಲ್ಲಿ ಇರುವ ಕಂಬಗಳ ಮಂಟಪದಲ್ಲಿರುವ ಕಲಾಕೃತಿಗಳು ವಿಶಿಷ್ಠವಾಗಿದೆ.
ಹಳೆಯದಾದ ಹಿಂದೆ ನಿರ್ಮಾಣವಾಗಿದ್ದ ಶ್ರೀ ಗೌರಿ ಗಂಗಾಧರೇಶ್ವರ ಕಲ್ಯಾಣ ಮಂಟಪವು ಇದೆ. ವಿಶೇಷವೆಂದರೆ ದೇವಾಲಯ ನಿಮಾರ್ಣದ ವಾಸ್ತುಶಿಲ್ಪ ಸುಂದರವಾಗಿದೆ. ಆದರೆ ದೇಗುಲ ತುಂಬಾ ಹಳೆಯದಾದ ಕಾರಣ ಶಿಥಲ ವ್ಯವಸ್ಥೆಗೆ ತಲುಪಿದೆ.
ದೇವಾಲಯ ಸುತ್ತಲು ನಿರ್ಮಾಣವಾಗಿದ್ದ ರಕ್ಷಣಾ ಗೋಡೆ ಕೂಡ ಮುರಿದು ಬಿದ್ದಿದೆ. ದೇವಾಲಯಗಳ ಮೇಲಿನ ಗೋಪುರಗಳು ಹಾಳಾಗಿವೆ, ವಿರೂಪಗೊಂಡು ಕಲಾಕೃತಿಗಳು ಅಲ್ಲಲ್ಲಿ ಕಾಣಸಿಗುತ್ತದೆ. ಈ ದೇಗುಲವನ್ನು ಜೀಣರ್ೋದ್ದಾರಗೊಂಡು ಸಂರಕ್ಷಿಸಿದರೆ ಖಂಡಿತ ಜಿಲ್ಲೆಯ ಮತ್ತೊಂದು ಪ್ರಮುಖ ಪ್ರವಾಸಿ ಸ್ಥಳವಾಗುವುದರಲ್ಲಿ ಅಚ್ಚರಿಯಿಲ್ಲ.
ಇದೇ ತೇರಹಳ್ಳಿ ಗ್ರಾಮದಿಂದ ಸ್ವಲ್ಪ ದೂರ ಸಾಗಿದರೆ ಶಿವಗಂಗೆ ಸಿಗುತ್ತದೆ. ಇದೇ ಸ್ಥಳದಲ್ಲಿ ಅದಿಮ ಸಾಂಸ್ಕೃತಿಕ ಕೇಂದ್ರವಿದೆ. ಬೆಟ್ಟದ ಮೇಲಿನ ಪ್ರಕೃತಿಯ ಮಡಿಲಲ್ಲಿ ಅದಿಮ ಸಾಂಸ್ಕೃತಿಕ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಹುಣ್ಣಿಮೆ ಹಾಡು ಹೆಸರಲ್ಲಿ ನಾಟಕ, ಕವಿಗೋಷ್ಠಿ, ಗಾಯನ, ತಮಟೆ ವಾದನ ಸೇರಿದಂತೆ ಅನೇಕ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ.
ಅದಿಮದಲ್ಲಿ ನಿರ್ಮಿಸಿರುವ ಹುಲ್ಲು ಮತ್ತು ಹೆಂಚಿನ ಮನೆಗಳು ಹಳ್ಳಿ ಸೊಗಡನ್ನು ನೆನಪಿಸುವಂತಿದೆ. ಅಲ್ಲಲ್ಲಿ ನಿರ್ಮಾಣ ಮಾಡಿರುವ ವಿವಿಧ ಕಲಾಕೃತಿಗಳು ಜಾನಪದ ಶ್ರೀಮಂತಿಕೆಯ ಬಗ್ಗೆ ಮೆಲುಕು ಹಾಕುವಂತಿದೆ. ಅದಿಮ ಸಾಂಸ್ಕೃತಿಕ ಕೇಂದ್ರವು ಸಾಂಸ್ಕೃತಿಕ ಲೋಕದ ಉಳಿವು, ಬೆಳವಣಿಗೆ ಶ್ರಮಿಸುತ್ತಿದೆ.
ತೇರಹಳ್ಳಿ ಕೇವಲ ಬೆಟ್ಟವಲ್ಲ, ಧರ್ಮಗಳ ಭಾವೈಕ್ಯತೆಯ ತಾಣವು ಹೌದು. ಕಾರಣ ಈ ಬೆಟ್ಟದ ಮೇಲೆ ಹಿಂದೂ, ಮುಸ್ಲಿಂ ಎರಡು ಸಮುದಾಯಕ್ಕೆ ಸೇರಿದ ಜನ ವಾಸಿಸುತ್ತಿದ್ದಾರೆ. ಎರಡು ಧರ್ಮಗಳಿಗೆ ಸೇರಿದ ಧಾರ್ಮಿಕ ಕೇಂದ್ರಗಳು ಇಲ್ಲಿ ಕಾಣ ಸಿಗುತ್ತದೆ.
ಏನ್ ಸ್ವಾಮಿ ನಮ್ಮೂರಿನ ಬೆಟ್ಟ ನೋಡಕ್ಕೆ ಬಂದಿದ್ದಿರಾ.. ಬಹುಃಶ ನಿಮಗೆ ಬೇರೆಲ್ಲೂ ಈ ರೀತಿಯ ಬೆಟ್ಟ ಸಿಗಲಿಕ್ಕಿಲ್ಲ ಬಿಡಿ, ಗ್ರಾಮದಲ್ಲಿ ಅನ್ಯ ಧರ್ಮಗಳ ಜನ ವಾಸಿವಿದ್ದರು ಎಂದು ಭೇದ ಭಾವ ಬಂದಿಲ್ಲ. ಅಷ್ಟಕ್ಕೂ ದೇವರ ಒಬ್ಬನೇ ನಾಮ ಹಲವು ಎಂಬ ಮಾತು ಸತ್ಯ ಬಿಡಿ ಎಂದ.
ವಿಶೇಷವೆಂದರೆ 7 ಗ್ರಾಮಗಳ ಜನ ಬೆಟ್ಟದಲ್ಲಿರುವ ವಿಸ್ತಾರವಾದ ಭೂ ಪ್ರದೇಶದಲ್ಲೇ ಕೃಷಿಯೂ ಮಾಡುತ್ತೇವೆ. ಹೊಟ್ಟೆ ಪಾಡಿಗಾಗಿ ಒಂದಷ್ಟು ಜನ ಕೂಲಿಗೂ ಹೋಗುತ್ತಾರೆ. ಅಂದ ಹಾಗೆ ನನಗೆ 5 ಜನ ಮಕ್ಕಳು, ನಮ್ಮ ಮನೆ ದೇವ್ರು ತಿರುಪತಿ ವೆಂಕಟರಮಣ ಸ್ವಾಮಿ. ಆದ್ದರಿಂದ 5 ಜನರಿಗೂ ಶ್ರೀನಿವಾಸ, ಹರಿ ಸೇರಿದಂತೆ ವೆಂಕಟೇಶ್ವರನ ಹೆಸರುಗಳನ್ನೇ ಇಟ್ಟಿದ್ದೇನೆ.
ಆದ್ರೂ ನಗರಗಳಲ್ಲಿ ಇರುವಷ್ಟು ಧಾರ್ಮಿಕ ವೈಷಮ್ಯ ನಮ್ಮಲ್ಲಿ ಇಲ್ಲ ಬಿಡಿ ಎಂದು ಉಚ್ಚರಿಸಿದ. ಅವರ ಮಾತು ಕೇಳುತ್ತಿದ್ದರೆ ವಿಶ್ವವಿದ್ಯಾಲಯವೊಂದರ ಹಿರಿಯ ಪ್ರಾದ್ಯಾಪಕರಿಗಿಂತ ಹೆಚ್ಚು ಅರ್ಥಪೂರ್ಣವಾದ ಭಾಷಣ ಕೇಳುವಂತಿತ್ತು.
ತೇರಹಳ್ಳಿ ಬೆಟ್ಟದಲ್ಲಿ ಕೃಷಿಗೆ ಮೂಲ ಆಧಾರ ಮಳೆ. ಕೆಲ ಬಾವಿ, ಕೆರೆ, ಕುಂಟೆಗಳು ಇವೆ. ಮಳೆ ಬಿದ್ದು ಬಾವಿ, ಕುಂಟೆ ತುಂಬಿದರೆ ಕೃಷಿ ಚಟುವಟಿಕೆಗಳು ಗರಿಗೆದೆರುತ್ತವೆ. ಬೆಟ್ಟದ ಪ್ರದೇಶವಾದ್ದರಿಂದ ಬಾವಿಗಳ ಸುತ್ತಮುತ್ತ ತೇವಾಂಶ ಸಹಜವಾಗಿಯೇ ಹೆಚ್ಚಿರುವುದರಿಂದ ನೀರು ಬೇಗನೆ ಖಾಲಿಯಾಗಲ್ಲ ಹಾಗೂ ಇಂಗುವುದಿಲ್ಲ.
ತೇರಹಳ್ಳಿ ಬೆಟ್ಟಕ್ಕೆ ಡಾಂಬರು ರಸ್ತೆ ಇದ್ದು, ಪ್ರತಿನಿತ್ಯವೂ ನಿಗದಿತ ಸಮಯಕ್ಕೆ ಸರಕಾರಿ ಬಸ್ ಸೌಕರ್ಯ ಇರುವುದರಿಂದ ಬೆಟ್ಟದಲ್ಲಿ ವಾಸಿಸುವ ಜನಕ್ಕೆ ನಗರದ ಜೊತೆ ಸಂಪರ್ಕ ಸಾಧಿಸಲು ಸಹಕಾರಿಯಾಗಿದೆ. ಕೆಲ ಪುಂಡ ಪೋಕರಿಗಳು ತೇರಹಳ್ಳಿ ಬೆಟ್ಟಕ್ಕೆ ಬಂದು ಬೆಟ್ಟದ ಅಂದ ಕೆಡಿಸಲು ಕೆಲವರು ಮುಂದಾಗುತ್ತಲೇ ಇರುತ್ತಾರೆ. ಅಂತವರ ಆಟಕ್ಕೆ ಕಡಿವಾಣ ಬಿದ್ದರೆ ಬೆಟ್ಟದ ಸೌಂದರ್ಯಕ್ಕೆ ಧಕ್ಕೆ ಬರುವುದಿಲ್ಲ.
ತೇರಹಳ್ಳಿ ಬೆಟ್ಟವು ವಿಸ್ಮಯಗಳ ತಾಣವು ಹೌದು. ಆ ವಿಸ್ಮಯ ನಮ್ಮ ಊಹೆಗೂ ಮಿಗಿಲಾದದ್ದು ಎಂಬುವುದು ಸತ್ಯ.
ಹಾಗೆಯೇ ಕೋಲಾರದಿಂದ ತೀರ ಹತ್ತಿರದಲ್ಲಿರುವ ಅಂತರಗಂಗೆಯ ಬೆಟ್ಟವು ದಶಕಗಳ ಇತಿಹಾಸವನ್ನು ಹೊಂದಿದೆ. ಇದು ವಿಚಿತ್ರವೋ, ನಿಸರ್ಗದ ಅದ್ಬುತವೋ ಒಟ್ಟಿನಲ್ಲಿ ಈ ಸ್ಥಳ ಒಂದು ರೀತಿಯಲ್ಲಿ ಪವಾಡವನ್ನು ಮಾಡುತ್ತಿದೆ ಎಂದರೆ ತಪ್ಪಾಗುವುದಿಲ್ಲವೆನೋ ಏಕೆ ಅಂತಿರಾ..
ಕೋಲಾರ ಎಂದರೆ ತಕ್ಷಣ ಎಲ್ಲರಿಗೂ ನೆನಪಾಗುವುದು ಚಿನ್ನ, ಈಗ ಚಿನ್ನ ಹೋಗಿ ಬರಗಾಲ ಆವರಿಸಿದೆ. ಕೋಲಾರ ಎಂದರೆ ಬರದ ನಾಡು ಎಂದು ಪ್ರಸ್ತುತ ದಿನಗಳಲ್ಲಿ ಕರೆಸಿ ಕೊಳ್ಳುತ್ತಿದೆ. ಆದರೆ ಅಂತರಗಂಗೆ ಇದಕ್ಕೆ ಅಪವಾದ. ಕೋಲಾರ ನಗರದಿಂದ 4 ಕೀ.ಮಿ ದೂರವಿರುವ ಈ ಸ್ಥಳದಲ್ಲಿ ಸದಾ ಜಲ ಮಾತೆ ಹರಿಯುತ್ತಲೆ ಇರುತ್ತಾಳೆ. ಅದು ಸಿಹಿ ನೀರು, ಈ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವನೆ ಆಸ್ತಿಕರದ್ದು.
ಅಂತರಗಂಗೆ ಬೆಟ್ಟವನ್ನು ಶತಶೃಂಗ ಪರ್ವತ ಎಂತಲು ಕರೆಯುತ್ತಾರೆ ಇಲ್ಲಿ ಮುಖ್ಯವಾಗಿ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯವಿದೆ. ಸುಂದರವಾದ ಕಲ್ಯಾಣಿಯು ಇದೆ, ಹಿಂದೂಗಳ ಪಾಲಿಗೆ ಅಂತರಗಂಗೆ ದಕ್ಷಿಣದ ಕಾಶಿ ಎಂದೆ ಪ್ರಖ್ಯಾತಿ ಪಡೆದಿದೆ.
ಹಾಗೆಯೇ ಇಲ್ಲಿ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇಗುಲ, ಬೆಟ್ಟದ ಕೆಳ ಭಾಗದಲ್ಲಿ ಜಲಕಂಠೇಶ್ವರ ಸ್ವಾಮಿ, ವಿಶಾಲಕ್ಷಮ್ಮ, ಮಹಾಗಣಪತಿ, ನವಗ್ರಹ ದೇವಸ್ಥಾನ ಹಾಗೂ ಉದ್ಯಾನವನವು ಇದೆ.
ಬೆಟ್ಟದ ಮೇಲೆ ಹತ್ತುವಾಗ ಮೆಟ್ಟುಲುಗಳ ಬಳಿ ಕೋಲಾರ ಭಾಗದಲ್ಲಿ ಕಂಡು ಬರುವ ವಿವಿಧ ಜಾತಿಯ ಚಿಟ್ಟೆಗಳಾದ ಕಾಮನ್ ಇಂಡಿಯನ್ ಕ್ರೌನ್, ಗ್ರೇಟ್ ಎಗ್ಪ್ಲೈಯ್, ಕಾಮನ್ ವಂಡರರ್, ಯಲ್ಲೋ ಫ್ಯಾನ್ಸಿ ಮುಂತಾದ ಚಿಟ್ಟೆಗಳು ಹಾಗೂ ವಿವಿಧ ವನ್ಯ ಪ್ರಾಣಿಗಳ ಚಿತ್ರಗಳನ್ನು ಪ್ರದಶರ್ಿಸಲಾಗಿದೆ.
ಬೆಟ್ಟದ ಮಧ್ಯಭಾಗದಲ್ಲಿ ಪ್ರವಾಸಿಗರು ಅಂತರಗಂಗೆ ಬೆಟ್ಟದ ಸೌಂದರ್ಯವನ್ನು ನೋಡಲು ಸಣ್ಣದಾದ ವೀಕ್ಷಣಾ ಗೋಪುರವನ್ನು ಕೂಡ ನಿರ್ಮಿಸಲಾಗಿದೆ.
ದೇಶದಲ್ಲಿನ ಕೆಲವೇ ಪ್ರದೇಶಗಳಲ್ಲಿ ಈ ರೀತಿ ಬಸವಣ್ಣ ಬಾಯಿಂದ ಸದಾ ನೀರು ಹರಿಯುತ್ತಿರುವ ದೃಶ್ಯಗಳನ್ನು ಕಾಣಬಹದು, ಜನಪ್ರತಿನಿಧಿಗಳ ಇಚ್ಛಾ ಶಕ್ತಿ ಕೊರತೆಯಿಂದ ಅಂತರಗಂಗೆ ಹೇಳಿಕೊಳ್ಳುವಂತಹ ಅಭಿವೃದ್ದಿಯಾಗಿಲ್ಲ.
ಹಿಂದೆ ಅಂತರಗಂಗೆಯಲ್ಲಿ ಜಿಂಕೆಗಳ ವನ್ಯಧಾಮವಿತ್ತು, ಪ್ರವಾಸಿಗರ ಅಟ್ರಾಕ್ಷನ್ ಕೂಡ ಆಗಿತ್ತು. ಅದೇಕೊ ಆನಂತರ ಜಿಂಕೆಗಳು ಇಲ್ಲಿಂದ ಕಣ್ಮರೆಯಾಗಿ ಹೋಗಿತು.
ಹಿಂದೆ ಅಂತರಗಂಗೆಯಲ್ಲಿ ಜಿಂಕೆಗಳ ವನ್ಯಧಾಮವಿತ್ತು, ಪ್ರವಾಸಿಗರ ಅಟ್ರಾಕ್ಷನ್ ಕೂಡ ಆಗಿತ್ತು. ಅದೇಕೊ ಆನಂತರ ಜಿಂಕೆಗಳು ಇಲ್ಲಿಂದ ಕಣ್ಮರೆಯಾಗಿ ಹೋಗಿತು.
ಅಂತರಗಂಗೆ ನೀರಿನ ರುಚಿ ನೋಡದ ಮಂದಿ ಕೋಲಾರ ಜಿಲ್ಲೆಯಲ್ಲಿ ಕಾಣಲ್ಲ. ಅಷ್ಟೇಕೆ ಇವತ್ತಿಗೂ ಸೈಕಲ್, ದ್ವಿಚಕ್ರ, ತಳ್ಳುವ ಗಾಡಿಗಳಲ್ಲಿ ದೊಡ್ಡ ವಾಟರ್ ಕ್ಯಾನ್ಗಳನ್ನು ತಂದು ನೀರು ತುಂಬಿಸಿಕೊಂಡು ಹೋಗುತ್ತಾರೆ. ಕಾರ್ತಿಕ
ಸೋಮವಾರಗಳಲ್ಲಿ ನಡೆಯುವ ಲಕ್ಷದಿಪೋತ್ಸವು ಎಲ್ಲರ ಗಮನ ಸೆಳೆಯುತ್ತದೆ.
ನೀವೇನೆ ಹೇಳಿ.. ಬೆಟ್ಟ, ಗುಡ್ಡಗಳಲ್ಲಿ ಅಲೆದಾಡುವವರಿಗೆ ಸಿಗುವ ಆನಂದ, ಸಂತೋಷ ಬೇರೆಯವರಿಗೆ ಅರ್ಥವಾಗಲ್ಲ. ಪರಿಸರದ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವವರು ಅನುಭವಿಸುವ ಖುಷಿ ಇತರರಿಗೆ ಸಿಗಲ್ಲ. ತೇರಹಳ್ಳಿ ಬೆಟ್ಟದಲ್ಲಿ ಸಿಕ್ಕ ಒಬ್ಬ ವ್ಯಕ್ತಿ ಹೇಳುತ್ತಾರೆ ಕನಿಷ್ಟ ವಾರಕ್ಕೊಮ್ಮೆದ್ದಾರೂ ಬೆಟ್ಟ, ಗುಡ್ಡ, ಅರಣ್ಯಗಳತ್ತ ಹೊರಟು ಹೋದರೆ ನೆಮ್ಮದಿಯ ಜೀವನದ ಜೊತೆಗೆ ತಲೆಯಲ್ಲಿ ತುಂಬಿರುವ ಬೇಡವಾದ ವಿಚಾರಗಳು ಮರೆಯುತ್ತೇವೆ ಎನ್ನುತ್ತಾರೆ.
ಕೋಲಾರ ಜಿಲ್ಲೆಗೆ ಅಂತರಗಂಗೆ ಮತ್ತು ತೇರಹಳ್ಳಿ ಬೆಟ್ಟ ಎರಡು ಮುಕುಟ ಮಣಿಗಳು ಎಂದರೆ ಅಶೋಕ್ತಿಯಲ್ಲ.


