ಬುಧವಾರ, ಅಕ್ಟೋಬರ್ 9, 2019

ಫ್ರೆಂಡ್ is a Forever & Ever..


ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ  

ಮೊನ್ನೆ ಟಿ.ವಿಯಲ್ಲಿ ತ್ರಿ ಇಡಿಯಟ್ಸ್ ಚಿತ್ರ ಹಾಕಿದ್ದರು. ಮೂರು ಜನ ಸ್ನೇಹಿತರ ನಡುವಿನ ಕಥಾ ಹಂದರವನ್ನು ಹೊಂದಿರುವ ಚಿತ್ರವದು. ಕಾಲೇಜಿನಲ್ಲಿ ಪರಿಚಯವಾಗುವ 3 ಜನ ಸ್ನೇಹಿತರು (ವಿಜಯ್, ಶ್ರೀಕಾಂತ್, ಜೀವ) ಅನೇಕ ಕಷ್ಟಗಳು ಎದುರಾದರೂ ಪರಸ್ಪರ ಸಹಕಾರದೊಂದಿಗೆ ತಮ್ಮ ಅಂತಿಮ ಗುರಿಯನ್ನು ತಲುಪುತ್ತಾರೆ. ಅದರಲ್ಲೂ ನಟ ವಿಜಯ್ ತನ್ನ ಇಬ್ಬರು ಸ್ನೇಹಿತರಿಗೆ ಕೊಟ್ಟ ಪ್ರೋತ್ಸಾಹ, ಹುಮಸ್ಸು ಅವಸ್ಮರಣೀಯ. ಹಾಸ್ಯ ಮಿಶ್ರಿತ ಚಿತ್ರವು ಸ್ನೇಹಿತರ ನಡುವೆ ಇರಬೇಕಾದ ಗುಣಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ನಿರ್ದೇಶಕ ಶಂಕರ್ ಚಿತ್ರದಲ್ಲಿ ಒಂದು ಒಳ್ಳೆಯ ಮೆಸೇಜ್ ನೀಡಿದ್ದಾರೆ.  
ವಿಶೇಷವೆಂದರೆ ಪ್ರತಿವರ್ಷವು ವಿಶ್ವದಾದ್ಯಂತ ಹಲವಾರು ದಿನಚಾರಣೆಗಳನ್ನು ಆಚರಿಸುವ ಪರಿಪಾಠ ಇದೆ. ವಿಶ್ವ ಮಣ್ಣು ದಿನ, ವಿಶ್ವ ಮಕ್ಕಳ ದಿನ, ವಿಶ್ವ ಆಹಾರ ದಿನ, ವಿಶ್ವ ಶಿಕ್ಷಕರ ದಿನ, ಶಾಂತಿ ದಿನ, ಯುವ ದಿನ, ಯೋಗ ದಿನ, ವಿಶ್ವ ಸ್ನೇಹಿತರ ದಿನ, ವಿಶ್ವ ಪರಿಸರ ದಿನ, ಪ್ರೇಮಿಗಳ ದಿನ, ಕಾರ್ಮಿಕರ ದಿನ, ಪ್ರವಾಸೋದ್ಯಮ ದಿನ, ರೈತರ ದಿನ ಸೇರಿದಂತೆ ಹತ್ತಾರು ದಿನಾಚರಣೆಗಳನ್ನು ಆಚರಿಸಿಕೊಳ್ಳುತ್ತಿದ್ದೇವೆ. ಇದರಲ್ಲಿ ಅತ್ಯಂತ ಪ್ರಮುಖವಾದ ದಿನ ಎಂದರೆ ಸ್ನೇಹಿತರ ದಿನ, ಭಾರತದಲ್ಲಿ ಪ್ರತಿವರ್ಷ ಆಗಸ್ಟ್ ತಿಂಗಳಲ್ಲಿ ಬರುವ ಮೊದಲ ಭಾನುವಾರದಂದು ಫ್ರೆಂಡ್ ಶಿಫ್ ಡೇ ಆಚರಿಸುವ ಪದ್ದತಿ ಬೆಳೆದಿದೆ.
ಹಾಗೆಯೇ ಬ್ರೆಜಿಲ್ ನಲ್ಲಿ ಜುಲೈ.20, ಫಿನ್ ಲ್ಯಾಂಡ್, ನೇಪಾಳ್ ನಲ್ಲಿ ಜುಲೈ.30, ಸ್ಪೇನ್ ಜುಲೈ.20, ಯು.ಎಸ್ ನಲ್ಲಿ ಫೆಬ್ರವರಿ 15, ಮೆಕ್ಸಿಕೋ ನಲ್ಲಿ ಜುಲೈ.14 ಸೇರಿದಂತೆ ಹಲವು ದೇಶಗಳಲ್ಲಿ ತಮ್ಮ ಪದ್ದತಿಯಂತೆ ಆಯಾ ದಿನಗಳಂದು ಸ್ನೇಹಿತರ ದಿನವನ್ನು ಆಚರಿಸುತ್ತಾರೆ. ಇತ್ತಿಚೀಗೆ ಸೋಷಿಯಲ್ ಮೀಡಿಯಾಗಳು ಬಂದ ಮೇಲಂತು ಪ್ರೆಂಡ್ ಶಿಫ್ ಡೇ ದಿನದಂದು ಶುಭಾಷಯಗಳ ವಿನಿಮಯದ ಸದ್ದು ಜೋರಾಗಿಯೇ ನಡೆಯುತ್ತದೆ. ಮೊದಲೆಲ್ಲ ಅಂಗಡಿಗಳಿಗೆ ಹೋಗಿ ಗ್ರಿಟಿಂಗ್ ಕಾರ್ಡ್ ಖರಿದೀಸಿ ಅದನ್ನು ತಮ್ಮ ಸ್ನೇಹಿತನಿಗೆ ಕೊಟ್ಟು ಶುಭಾಶಯ ಹೇಳಿ ಪ್ರೆಂಡ್ ಶಿಫ್ ಡೇ ಆಚರಿಸುವ ವ್ಯವಸ್ಥೆ ಇತ್ತು. ಸೋಷಿಯಲ್ ಮೀಡಿಯಾಗಳ ಹವಾದ ಮಧ್ಯೆ ಗ್ರೀಟಿಂಗ್ ಕಾರ್ಡ್ ಗಳು ಕಣ್ಮರೆಯಾದರೂ, ವಾಟ್ಸಾಪ್ ಮೇಸೆಜ್ ಗಳ ಮೂಲಕ ಶುಭಾಷಯಗಳ ವಿನಿಮಯ ನಡೆಯುತ್ತಿದೆ. ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಪ್ರೆಂಡ್ ಶಿಫ್ ಡೇಗೆ ಸಂಬಂಧಿಸಿದಂತೆ ಹಾಡೊಂದನ್ನು ಹಾಕಿ ಸಂಭ್ರಮಿಸುವ ಕಾಲವಿದು.
If you never had friends you never lived life ಎಂಬ ಮಾತಿದೆ. ಇದರರ್ಥ ಉತ್ತಮವಾದ ಸ್ನೇಹಿತರನ್ನು ಹೊಂದಿಲ್ಲದಿದ್ದರೆ ಜೀವನವನ್ನು ಪರಿಪೂರ್ಣವಾಗಿ ಸಾಗಿಸಲು ಸಾಧ್ಯವಿಲ್ಲ ಎನ್ನುತ್ತದೆ. ಈ ಮಾತು ಅಕ್ಷರಹ ಸತ್ಯವು ಹೌದು. ಪ್ರೆಂಡ್ ಶಿಫ್ ಎಂಬುವುದು ಅತ್ಯಂತ ಆತ್ಮೀಯತೆ, ಅನುಬಂಧವನ್ನು ಹೊಂದಿರುವ ಭಾವನಾತ್ಮಕ ಸಂಬಂಧಗಳಿಂದ ಕೂಡಿದ ವಿಚಾರ. ಈ ಜಗತ್ತಿನಲ್ಲಿ ಅಣ್ಣ, ಅಕ್ಕ, ತಂಗಿ, ತಮ್ಮ ಸೇರಿದಂತೆ ಮತ್ತಿತರ ಬಂಧಗಳು ಇಲ್ಲದಿರುವ ವ್ಯಕ್ತಿಗಳು ಸಿಗುತ್ತಾರೆ. ಆದರೆ ಸ್ನೇಹಿತರು ಇಲ್ಲದೇ ಜೀವನ ಮಾಡುತ್ತಿರುವ ವ್ಯಕ್ತಿಗಳು ಸಿಗಲಾರರು, ಕಾಣಲು ಸಾಧ್ಯವು ಇಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹಿತರು ಬಹಳ ದೊಡ್ಡ ಪಾತ್ರ ವಹಿಸುತ್ತಾರೆ. 
ಸ್ನೇಹಿತರ ನಡುವೆ ರಕ್ತ ಸಂಬಂಧ ಇಲ್ಲದಿದ್ದರು ಅದಕ್ಕಿಂತ ಮಿಗಿಲಾದ ಒಂದು ಶ್ರೇಷ್ಠವಾದ ಸಂಬಂಧ ಸ್ನೇಹಿತರ ಜೊತೆಗಿನದ್ದು ಎಂದರೆ ತಪ್ಪೇನಿಲ್ಲ. ಯಾವುದೇ ಸ್ವಾರ್ಥ, ಪ್ರತಿಪಲಾಪೇಕ್ಷೆಗಳಿಲ್ಲದೇ ಹುಟ್ಟುವ ಸ್ನೇಹವು ಧೀರ್ಘ ಕಾಲದವರೆಗೂ ಉಳಿಯುತ್ತದೆ ಹಾಗೂ ನೈತಿಕವಾಗಿಯೂ ಗಟ್ಟಿಗೊಳ್ಳುತ್ತದೆ. ಜೀವನದಲ್ಲಿ ಎದುರಾಗುವ ಕಷ್ಟಗಳಲ್ಲಿ ಹಲವು ಸ್ನೇಹಿತರು ಸಹಾಯಸಹ್ತ ಚಾಚಿ ಕಷ್ಟಗಳಿಂದ ಪಾರು ಮಾಡಿದ ನಿದರ್ಶನಗಳು ಎಲ್ಲರ ಬದುಕಿನಲ್ಲೂ ಇದ್ದೇ ಇರುತ್ತದೆ. ಸ್ವಂತ ಅಣ್ಣ, ತಮ್ಮ, ಅಕ್ಕ, ತಂಗಿಯರೇ ಹಲವು ಬಾರಿ ನಮಗೆ ಕಷ್ಟಗಳು ಎದುರಾದಾಗ ನಮ್ಮನ್ನು ಕೈಬಿಟ್ಟಿರುತ್ತಾರೆ. ಆದರೆ ಯಾವುದೇ ಪ್ರತಿಫಲವನ್ನು ಅಪೇಕ್ಷೆ ಪಡೆಯದೆ ಸ್ನೇಹಿತರು ಹತ್ತಿರ ಸಂಬಂಧಿಕರಿಗಿಂತ ಹೆಚ್ಚಾಗಿ ನಮ್ಮ ಕಷ್ಟದಲ್ಲಿ ಬೆನ್ನುಲುಬಾಗಿ ನಿಂತು, ಸಮಸ್ಯೆಯಿಂದ ಪಾರು ಮಾಡಿರುತ್ತಾರೆ.  ಬಹಳಷ್ಟು ಜನ ತಮ್ಮ ಸಾಧನೆಗೆ ತಮ್ಮ ಸ್ನೇಹಿತರೆ ಮೂಲ ಕಾರಣ ಅಂತ ಹೇಳಿಕೊಳ್ಳುವವರು ಬಹಳಷ್ಟಿದ್ದಾರೆ.
ನಮ್ಮ ವೈಯಕ್ತಿಕ ಎಷ್ಟೋ ವಿಚಾರಗಳು ಕುಟುಂಬದವರಿಗೆ ಗೊತ್ತಿರುವುದಿಲ್ಲ. ಆದರೆ ಅಂತಹ ವೈಯಕ್ತಿಕ ವಿಚಾರಗಳನ್ನು ಕೂಡ ಸ್ನೇಹಿತರ ಬಳಿ ಹೇಳಿಕೊಂಡಿರುತ್ತೇವೆ, ಅಷ್ಟರ ಮಟ್ಟಿಗೆ ಸ್ನೇಹಿತರನ್ನು ಆಳವಾಗಿ ನಂಬಿರುತ್ತೇವೆ.
“It’s better to have a few friends than hundreds of friends who are only there when they need you.” ಎಂಬ ಎರಡು ಸಾಲುಗಳ ಈ ಸಂದೇಶವು ಹಲವು ವಿಚಾರಗಳ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. ನಮ್ಮ ಅವಶ್ಯಕತೆ ಸಹಾಯ ಬೇಕಾದಾಗ ಮಾತ್ರ ಬರುವಂತಹ ನೂರಾರು ಸ್ನೇಹಿತರನ್ನು ಸಂಪಾದಿಸುವುದಕ್ಕಿಂತ, ಪ್ರಾಮಾಣಿಕತೆಯಿಂದ ನಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಬೆರಳಣಿಕೆಯಷ್ಟು ಸ್ನೇಹಿತರ ಸಂಪಾದನೆ ಉತ್ತಮ ಎಂದು ಈ ಇಂಗ್ಲೀಷ್ ವಾಕ್ಯ ಹೇಳುತ್ತದೆ. ನಮಗೆ ನೂರಾರು ಜನ ಸ್ನೇಹಿತರು ಇದ್ದಾರೆ ಎಂದು ಸಂತೋಷ , ಜಂಬಕೊಚ್ಚಿಕೊಳ್ಳುವ ಅಗತ್ಯವಿಲ್ಲ. ಕಾರಣ ಆ ನೂರಾರು ಜನರಲ್ಲಿ ನಮ್ಮ ಕಷ್ಟಕ್ಕೆ ಬರುವ ಸ್ನೇಹಿತರು ಯಾರು ಇರುವುದಿಲ್ಲ. ಸ್ನೇಹಿತರ ಬಳಗ ದೊಡ್ಡದು ಮಾಡಿಕೊಳ್ಳುವುದಕ್ಕಿಂತ ವ್ಯಕ್ತಿತ್ವವುಳ್ಳ ಕೆಲವೇ ಕೆಲವು ಸೀಮಿತ ಸ್ನೇಹಿತರ ಬಳಗವೇ ಉತ್ತಮ.
ನಾನು ಕಾರ್ಯ ನಿಮಿತ್ತ ಹಲವು ಸರಕಾರಿ ಶಾಲೆಗಳಿಗೆ ಹೋಗುತ್ತಿರುತ್ತೇನೆ, ಒಂದು ಶಾಲೆಯ ಗೋಡೆಯ ಮೇಲೆ ಈಗಿತ್ತು. ನೀವು ಜೀವನದಲ್ಲಿ ನಿಮ್ಮ ಗುರಿ ತಲುಪಬೇಕಾದರೆ, ಸಾಧಿಸುವ ಮನೋಭಾವ ಬೆಳೆಯಬೇಕಾದರೆ ಸಜ್ಜನರ ಸ್ನೇಹ ಮಾಡಿ ಎಂಬ ಬರಹವಿತ್ತು. ಇದನ್ನು ಓದಿದ ನಂತರ ನಾನು ಆ ಶಾಲೆಯ ಮುಖ್ಯ ಶಿಕ್ಷಕರನ್ನು ಕೇಳಿದೆ ಈ ಬರಹವನ್ನು ಬರೆಸಿದ ಉದ್ದೇಶ ಏನು ಎಂದಾಗ ಅವರ ಪ್ರತಿಕ್ರಿಯೆ ಹೀಗಿತ್ತು, ನೋಡಿ ಸಾರ್ ನಾನು ಕಳೆದ 25 ವರ್ಷಗಳಿಂದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಜೀವನದಲ್ಲಿ ಸಾಧಿಸುವ ಹಂಬಲ ಇರುವವರು ಮೊದಲು ಮಾಡಬೇಕಾದದ್ದು ಸಜ್ಜನರ ಸಹವಾಸ. ನಮ್ಮ ವ್ಯಕ್ತಿತ್ವಕ್ಕೆ ಒಂದು ರೂಪ ಕೊಡುವುದೇ ನಮ್ಮ ಸ್ನೇಹಿತರ ಬಳಗ. ಒಬ್ಬ ವ್ಯಕ್ತಿ ಒಳ್ಳೆಯವನೋ, ಕೆಟ್ಟವನೋ ತಿಳಿಯಬೇಕಾದರೆ ಬಹಳ ಸುಲಭ, ಆತ ಆಯ್ಕೆ ಮಾಡಿಕೊಂಡಿರುವ ಸ್ನೇಹಿತರನ್ನು ನೋಡಿದರೆ ಸಾಕು ಆತನ ವ್ಯಕ್ತಿತ್ವದ ಸಂಪೂರ್ಣ ಚಿತ್ರಣ ಸಿಗುತ್ತದೆ ಎಂದರು. ನಮ್ಮ ಸಾಧನೆಯ ದಾರಿ ಹಾದಿ ತಪ್ಪದೇ ನಡೆಯಬೇಕಾದರೆ ನಮ್ಮ ಜೊತೆಗಿನ ಸ್ನೇಹಿತರ ಪಾತ್ರವು ಇರುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ವಿರುದ್ದ ದಿಕ್ಕಿನ ಸ್ನೇಹಿತರು ಇದ್ದರೆ ನಮ್ಮ ಬದುಕು ಎತ್ತ ಸಾಗುತ್ತದೆ ಹೇಳಲು ಸಾಧ್ಯವಿಲ್ಲ ಎಂದರು.  
ನಿಜ ಇಂದು ಶಾಲೆಗೆ ಹೋಗುವ ವಿದ್ಯಾರ್ಥಿ ಧೂಮಪಾನ, ಮದ್ಯಪಾನ ಸೇರಿದಂತೆ ಮತ್ತಿತರ ಕೆಟ್ಟ ಚಟಗಳಿಗೆ ದಾಸನಾಗಿದ್ದಾನೆ ಎಂದರೆ ಅದಕ್ಕೆ ಮೂಲ ಕಾರಣ ಆತನ ಸ್ನೇಹಿತರು. ಒಬ್ಬ ವಿದ್ಯಾರ್ಥಿ ಪ್ರಾಥಮಿಕ, ಫ್ರೌಢ ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣನಾಗಿರುತ್ತಾನೆ. ಆದರೆ ಕಾಲೇಜಿನಲ್ಲಿ ಮಾತ್ರ ಅನುತ್ತೀರ್ಣನಾಗುತ್ತಾನೆ. ಅದಕ್ಕೆ ಕಾರಣ ಸಹವಾಸ ದೋಷ. ಕೆಲವರಂತು ನಾವು ಹೇಗೋ ಕೆಟ್ಟು ಹೋಗಿದ್ದೇವೆ, ಇತನನ್ನು ನಮ್ಮ ದಾರಿಗೆ ಹೇಳೆದು ಬಿಡೋಣ ಎಂದು ಎಷ್ಟೋ ಜನರು ತಮ್ಮ ಸ್ನೇಹಿತರ ಜೀವನವನ್ನೇ ಹಾಳು ಮಾಡಿದ ಪ್ರಸಂಗಗಳು ಸಾಕಷ್ಟಿವೆ. ಅಷ್ಟೇಕೆ ಎಷ್ಟೋ ಜನರು ತಮ್ಮ ವಿದ್ಯಾಭ್ಯಾಸ, ವೃತ್ತಿ ಜೀವನ, ಕೌಟುಂಬಿಕ ಜೀವನವನ್ನು ಹಾಳು ಮಾಡಿಕೊಂಡಿದ್ದು ಸ್ವತಹ ತಮ್ಮ ಆತ್ಮೀಯ ಸ್ನೇಹಿತರಿಂದಲೇ ಎಂಬ ವಾಸ್ತವವನ್ನು ಮುಂದಿಡುತ್ತಾರೆ. ಇಂದು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಚಿಕ್ಕವಯಸ್ಸಿಗೆ ಜೈಲು ಸೇರುತ್ತಿರುವವವರ ಹಿಂದೆ ಸ್ನೇಹಿತರ ದೋಷ ಬಲವಾಗಿ ಎದ್ದು ಕಾಣುತ್ತದೆ. ಯಾವುದೋ ಸಂದರ್ಭದಲ್ಲಿ ಪರಿಚಯವಾಗಿ, ಆ ಪರಿಚಯವೇ ಹಾದಿ ತಪ್ಪಿಸಿ, ಭವಿಷ್ಯವನ್ನೇ ಹಾಳು ಮಾಡಿ ಬಿಡುವ ಹಂತಕ್ಕೆ ತಲುಪಿಸಿ ಬಿಡುತ್ತದೆ. ವ್ಯಾಪಾರ, ವ್ಯವಹಾರಗಳಲ್ಲೂ ಸ್ನೇಹಿತರನ್ನು ನಂಬಿ ಮೋಸ ಹೋದವರ ಸಂಖ್ಯೆ ಹೆಚ್ಚೆ ಇದೆ.
ಅದು ಶಾಲಾ-ಕಾಲೇಜು, ಕಾರ್ಯ ನಿರ್ವಹಿಸುವ ಕೆಲಸದ ಸ್ಥಳ ಸೇರಿದಂತೆ ಎಲ್ಲಿಯೇ ಆದರೂ ನಾವು ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ಎಚ್ಚರವು ಅಗತ್ಯ. ಪ್ರತಿಯೊಬ್ಬರನ್ನು ದಿಢೀರ್ ಎಂದು ನಂಬುವುದು ತಪ್ಪು. ಅಳೆದು ತೂಗಿ ಹೆಜ್ಜೆ ಮುಂದೆ ಇಡಬೇಕಾಗುತ್ತದೆ. ನಮ್ಮ ವ್ಯಕ್ತಿತ್ವ ನಿರ್ಮಾಣದ  ಮೇಲೆ ಸ್ನೇಹಿತರ ಸಹವಾಸ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಹತ್ತಿರವಿರುವ ಸ್ನೇಹ ಸಂಪಾದನೆ ನಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಹೌದು. 
Having few true friends is better than having a large network of pretentious friends. Quality beats quantity all the time. ದೊಡ್ಡ ಪ್ರಮಾಣದಲ್ಲಿ ಸ್ನೇಹಿತರ ವರ್ಗವನ್ನು ಸೃಷ್ಟಿಸಿಕೊಳ್ಳುವುದಕ್ಕಿಂತ, ಕೆಲವೇ ಕೆಲವು ಸ್ನೇಹಿತರಿದ್ದರು ಚಿಂತೆಯಿಲ್ಲ. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ. ಬಹು ಮುಖ್ಯವಾಗಿ ಸ್ನೇಹವನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕಾದರೆ ಇಬ್ಬರಲ್ಲೂ ಹೊಂದಾಣಿಕೆಯ ಗುಣ ಇರಬೇಕು. ಹತ್ತಾರು ವರ್ಷಗಳ ಕಾಲ ಸ್ನೇಹಿತರಾಗಿದ್ದರು ಕೂಡ ಅವರ ಮಧ್ಯೆ ಬರುವ ಸಣ್ಣ ಮನಸ್ತಾಪಗಳು ( ಅಸೂಹೆ, ಅಹಂಕಾರ, ಸ್ವಾರ್ಥ, ಹಣದ ವ್ಯವಹಾರ, ಅಪನಂಬಿಕೆ ಮುಂತಾದುವುಗಳು) ಸಂಬಂಧಗಳಿಗೆ ಪೂರ್ಣವಾಗಿ ಪುಲ್ ಸ್ಟಾಪ್ ಇಟ್ಟು ಬಿಡುತ್ತದೆ, ಮತ್ತೆಂದು ಒಂದಾಗದ ಮಟ್ಟಿಗೆ ಸಂಬಂಧಗಳು ಹಳಸಿ ಹೋಗುತ್ತದೆ.
ನಮ್ಮ ಬಳಿ ಹಣ, ಅಂತಸ್ತು, ಅಧಿಕಾರ ಇದೆ ಎಂದು ಸ್ನೇಹ ಮಾಡುವ ವ್ಯಕ್ತಿಗಳಿಗಿಂತ ಆತ ಬಡವನಾಗಿದ್ದರು, ಕನಿಷ್ಟ ಎಲ್ಲಾದರೂ ಸಿಕ್ಕರೆ ಒಂದು ಸಣ್ಣ ಟೀ ಕೊಡಿಸುವ ಸಾಮರ್ಥ್ಯ ಇಲ್ಲದಿದ್ದರು ಚಿಂತೆಯಿಲ್ಲ, ಆತ ನಿಷ್ಕಲ್ಮಷ ಮನಸ್ಸಿನ ವ್ಯಕ್ತಿಯಾದರೆ ಸಾಕು, ಅಂತವಹರ ಸ್ನೇಹ ಸಂಪಾದನೆ ಎಷ್ಟೋ ಉತ್ತಮ. ಹಣ, ಅಧಿಕಾರ ಶಾಶ್ವತ ಅಲ್ಲ, ಅಂತಿಮವಾಗಿ ಉಳಿಯುವುದು ಪ್ರಾಮಾಣಿಕತೆ ಮಾತ್ರ. 
ನಮ್ಮದ್ದೇಷ್ಟೋ ಕನಸುಗಳು ಇರುತ್ತವೆ. ಆ ಕನಸುಗಳು ನನಸಾಗುವ ಮಟ್ಟಕ್ಕೆ ತಲುಪಬೇಕಾದರೆ ನಮ್ಮ ಜೊತೆಗಿನ ಸ್ನೇಹಿತರ ಸಹಕಾರವು ಬಹಳ ಮುಖ್ಯ. ಯಾವುದೋ ಒಂದು ಉದ್ದೇಶಕ್ಕೆ ನಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದದವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಅವರಿಂದ ಸಮಸ್ಯೆ ಎದುರಿಸುವ ಜೊತೆಗೆ ಹಾದಿ ತಪ್ಪಬೇಕಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಎಲ್ಲರನ್ನೂ ಆತ್ಮೀಯ ಸ್ನೇಹಿತರೆಂದು ನಂಬಿ ಸಲುಗೆಯಿಂದ ಇರುವುದು ಬಹಳ ದೊಡ್ಡ ತಪ್ಪು. ನಮ್ಮ ವೈಯಕ್ತಿಕ ವಿಚಾರಗಳನ್ನು ಹಿಂದೆ ಮುಂದೆ ಆಲೋಚಿಸದೆ ಆತ್ಮೀಯ ಸ್ನೇಹಿತರೆಂದು ನಂಬಿ ಹಂಚಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ತೊಡಕಾಗಬಹುದು. ಸ್ನೇಹಿತರ ಅಂತರಾಳ ಅರಿಯುವುದು ಮುಖ್ಯ, ಇಲ್ಲದೇ ಹೋದರೆ ಸಮಸ್ಯೆ ಒಳಗಾಗಬೇಕಾಗುತ್ತದೆ. 
ಕಾಲ ಬದಲಾದಂತೆ ಮನುಷ್ಯರು ಬದಲಾಗುತ್ತಿದ್ದಾರೆ. ಯಾವುದೇ ಲಾಭವಿಲ್ಲದಿದ್ದರೆ ಸ್ನೇಹಿತರನ್ನು ಹತ್ತಿರಕ್ಕೂ ಸೇರಿಸಿಕೊಳ್ಳದ ವರ್ಗ ಹೆಚ್ಚುತ್ತಿದೆ. ಬಹುತೇಕರು ಕ್ಯಾಲುಕೆಲೇಷನ್ ಮಾಡಿ ಸ್ನೇಹ ಮಾಡುವ ಹಂತಕ್ಕೆ ಬಂದು ನಿಂತಿದ್ದೇವೆ. ಹಾಗೆಯೇ ನಿಜವಾಗಲೂ ನೈತಿಕತೆಯುಳ್ಳ ಸ್ನೇಹಿತರನ್ನು ಕೂಡ ಎಂದು ದೂರ ಮಾಡಿಕೊಳ್ಳುವ ಹಂತಕ್ಕೆ ಹೋಗಲೇಬಾರದು. ಏಕೆಂದರೆ ಈ ಪ್ರಪಂಚದಲ್ಲಿ ಬೆಲೆ ಕಟ್ಟಲು ಸಾಧ್ಯವಾಗದ ಸಂಬಂಧಗಳ ಪೈಕಿ ಸ್ನೇಹವು ಒಂದು. ತೀರ ಅನುಮಾನಿಸುವುದು, ಅವಶ್ಯಕತೆ ಬಿದ್ದಾಗ ಮಾತ್ರ ಮಾತನಾಡುವುದು, ಅಗತ್ಯ ಇಲ್ಲದಿದ್ದಾಗ ದೂರ ಸರಿಸುವುದು ನಮ್ಮ ಮೇಲಿನ ಅಪನಂಬಿಕೆಗೆ ಕಾರಣವಾಗುತ್ತದೆ. ಇನ್ನೊಬ್ಬರನ್ನು ನೋಯಿಸಿ ಪಡೆಯುವ ಲಾಭವಾದರು ಏನು ಇಲ್ಲ. ಲಾಭಕ್ಕಾಗಿ, ದುರುದ್ದೇಶಕ್ಕಾಗಿ ಸ್ನೇಹ ಮಾಡಲೇಬಾರದು, ಭಾವನೆಗಳಿಗೆ ಬೆಲೆ ಕೊಡುವ ಸ್ನೇಹಿತರನ್ನು ಕಳೆದುಕೊಳ್ಳಲೇಬಾರದು. ಪವಿತ್ರವಾದ ಸ್ನೇಹವನ್ನು ಹೃದಯದಿಂದ ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಹೇಳುವುದು Best friend is a forever & ever..

15 ಕಾಮೆಂಟ್‌ಗಳು:

Unknown ಹೇಳಿದರು...

ಹೌದು. ಸ್ನೇಹದಲ್ಲಿ ಮನಸ್ತಾಪ. ನಂಬಿಕೆ ಕಳೆದುಕೊಂಡರೆ. ಹಾಗೂ ಒಬ್ಬನೊಬ್ಬರ ಮನಸುಗಳು ಅರ್ಥಮಾಡಿಕೊಂಡು ಸಾಗಿದರೆ ಸ್ನೇಹ ಎಂಬ ಅರ್ಥಕ್ಕೆ ಚಿರಯೂ ಹೆಸರು ಉಳಿಯುತ್ತದೆ. ನೀವು ಹೇಳಿದ ಹಾಗೆ ಟೀ. ಕಾಫಿ. ಬಿರಿಯಾನಿ ಕೊಡಿಸಿದರೆ ಸ್ನೇಹಿತರಾಗ ಬೇಕೆಂದಿಲ್ಲ ಸರ್.ಕಾಫಿ ಕೊಡಿಸಲು ಹಣ ಇಲ್ಲದಿದ್ದರೂ ಖುಷಿಯಿಂದ ಮಾತಾಡಿ ನಮ್ಮಲ್ಲಿರುವ ದುಃಖ ಹಂಚಿಕೊಂಡು ಮನಸು ಆಗುರ ಮಾಡುವುದೇ ಸ್ನೇಹ.ಇನ್ನೊಂದು ಮುಖ್ಯ ವಿಷಯ ಹೇಳಿದ್ರಿ ಸ್ನೇಹದಲ್ಲಿ ನಿಸ್ವಾರ್ಥ ನೋಡಬೇಕು ಏನೇನು ಆಶಿಸಬಾರದು..ಸ್ನೇಹದಲ್ಲಿ ಸ್ವಾರ್ಥಿಯಾದರೆ ಅಲ್ಲಿಗೆ ನಮ್ಮಲ್ಲಿರುವ ಸ್ನೇಹ ಕಳೆದುಕೊಂಡಂತೆ ಅಂತ ನನ್ನ.ಅಭಿಪ್ರಾಯ
ಸರ್ ತುಂಬಾ ಆಳವಾಗಿ ಅರ್ಥ ಮಾಡಿಸುವಲ್ಲಿ ವಾಸ್ತವತೆ ಬರೆದ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.. ಇನ್ನಷ್ಟು ಬರಹಗಳು ನಿಮ್ಮ ಬ್ಲಾಗ್ ನಲ್ಲಿ ಓದುತ್ತಿರುವೆ. ಶುಭವಾಗಲಿ ಸರ್.🙏💮

ಅನಾಮಧೇಯ ಹೇಳಿದರು...

ಹೌದು ಸರ್.ಸ್ವಾರ್ಥವಿಲ್ಲದ ಭಾವನೆ ಸ್ನೇಹ, ನಾವು ನಂಬಿದವರು ಕೈ ಎತ್ತಿದಾಗ ನಮ್ಮತ್ತ ಕೈ ಚಾಚುವವನೇ ನಿಜವಾದ ಸ್ನೇಹಿತ.

ಅನಾಮಧೇಯ ಹೇಳಿದರು...

Super

ಅನಾಮಧೇಯ ಹೇಳಿದರು...

Nice sir

Jaipal y s S Chadumanahalli ಹೇಳಿದರು...

Sir very nice message. Beautiful meaning. It's very experienced thoughts. ಸ್ನೇಹವೆಂದರೆ ಲಾಭವಾಶಿಸುವುದಲ್ಲ.ನಮ್ಮ ಜೀವನ ಕಷ್ಟ ಸುಖಗಳಿಂದ ಲಾಭಪಡೆಯುವ ಪವಿತ್ರವಾದ ಸಂಬಂಧ .ಎಂದು ಬಹಳ ಸೊಗಸಾಗಿ ಬರೆದಿರುವಿರಿ.ಶುಭವಾಗಲಿ ಸರ್ ನಿಮಗೆ.

ಅನಾಮಧೇಯ ಹೇಳಿದರು...

Nice story sir.

ಅನಾಮಧೇಯ ಹೇಳಿದರು...

Happy friendship day sir

ಅನಾಮಧೇಯ ಹೇಳಿದರು...

Good & Worth Value Words .

ಅನಾಮಧೇಯ ಹೇಳಿದರು...

Reality of life about friendship, nice sir

ಅನಾಮಧೇಯ ಹೇಳಿದರು...

Super Guruji

ಅನಾಮಧೇಯ ಹೇಳಿದರು...

Suprb sir good words God bless u sir

Pradeep k ಹೇಳಿದರು...

Super Guruji

ಅನಾಮಧೇಯ ಹೇಳಿದರು...

Nice 👍

ಅನಾಮಧೇಯ ಹೇಳಿದರು...

🙏👏💐👌Girish sar 👍

ಅನಾಮಧೇಯ ಹೇಳಿದರು...

Very very nice words which inspires youngsters and students especially. I am proud to be a friend Girish.