➤ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಮೊನ್ನೆ ನಮ್ಮ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹಳ್ಳಿಯೊಂದರ ಯುವಕ ಕರೆ ಮಾಡಿದ್ದ, ನಾನು ಕಾರ್ಯ ನಿರ್ವಹಿಸುವ ಸಂಸ್ಥೆಯು ಜಿಲ್ಲೆಯ ಗ್ರಾಮೀಣ ಯುವಕ-ಯುವತಿಯರಿಗೆ ವಿವಿಧ ರೀತಿಯ ಕೌಶಲ್ಯಯುತ ಹಾಗೂ ಸ್ವ ಉದ್ಯೋಗ ಕಲ್ಪಿಸುವ ತರಬೇತಿಗಳನ್ನು ನೀಡುವ ಕರ್ತವ್ಯ ನಿರ್ವಹಿಸುತ್ತದೆ.
ದಿನ ಪತ್ರಿಕೆಯೊಂದರಲ್ಲಿ ನಮ್ಮ ಸಂಸ್ಥೆಯಲ್ಲಿ ಮೊಬೈಲ್ ರಿಪೇರಿ ಮತ್ತು ಸರ್ವೀಸ್ ಕುರಿತ ತರಬೇತಿ ಸಿಗುತ್ತದೆ ಎಂಬ ಸುದ್ದಿ ಪ್ರಕಟವಾಗಿತ್ತು. ಅದರ ಬಗ್ಗೆ ಮಾತನಾಡಲು ಆತ ಕರೆ ಮಾಡಿದ್ದ. ಸಾರ್ ನಾನು ಮಾಲೂರಿನ ಹಳ್ಳಿಯಿಂದ ಕರೆ ಮಾಡುತ್ತಿದ್ದೇನೆ, ಪದವಿ ಮುಗಿದಿದೆ, ತಮ್ಮ ಸಂಸ್ಥೆಯವರು ಮೊಬೈಲ್ ರಿಪೇರಿ ಕುರಿತ ತರಬೇತಿ ನೀಡುವ ಬಗ್ಗೆ ಮಾಹಿತಿ ಗೊತ್ತಾಯಿತು. ನನಗೂ ಮೊಬೈಲ್ ರಿಪೇರಿ ತರಬೇತಿ ಕೊಟ್ಟರೆ ಸಹಾಯವಾಗುತ್ತದೆ ಎಂದ. ನನಗೆ ಆಶ್ವರ್ಯ ಅರೆ ಪದವಿ ಮುಗಿದಿದೆ. ಮಾಲೂರು ಭಾಗದಲ್ಲೂ ಕೆಲ ಕೈಗಾರಿಕೆಗಳು ಇವೆ, ಜೊತೆಗೆ ಬೆಂಗಳೂರಿಗೂ ಹತ್ತಿರವಿರುವ ಪ್ರದೇಶ, ಒಂದಷ್ಟು ಪ್ರಯತ್ನ ಪಟ್ಟರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು.

ಪದವಿ ಮುಗಿದಿದೆ ನಿನಗ್ಯಾಕೆ ಮೊಬೈಲ್ ರಿಪೇರಿ ಎಂದು ಪ್ರಶ್ನೆ ಹಾಕಿದಾಗ ಆತ ಹೇಳಿದ ಉತ್ತರ ಕೇಳಿ ನನಗೆ ಮತ್ತಷ್ಟು ಬೇಸರ, ನೋವು ಆಯಿತು. ಕಾರಣ ಇಷ್ಟೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳೆಂದರೆ ಬರ ಪೀಡಿತ ಜಿಲ್ಲೆಗಳೆಂದು ಗೊತ್ತೆ ಇದೆ. ದಿನದಿಂದ ದಿನಕ್ಕೆ ಯಾವ ರೀತಿ ಬಯಲು ಸೀಮೆ ಭಾಗಗಳಲ್ಲಿ ಉದ್ಯೋಗಗಳು ಅದರಲ್ಲೂ ಕೃಷಿಯಲ್ಲಿ ಇಳಿಮುಖವಾಗುತ್ತಿದೆ ಎನ್ನುವುದಕ್ಕೆ ಆತ ಉದಾಹರಣೆಗಳ ಸಮೇತ ಉತ್ತರ ಕೊಟ್ಟ ನೋಡಿ ಸಾರ್ ನಮ್ಮೂರಲ್ಲಿ ನಮ್ಮದು ಸ್ವಲ್ಪ ಜಮೀನಿತ್ತು, ಅದರಲ್ಲಿ ಕೊಳವೆ ಬಾವಿ ಇದೆ, ಕೆಲ ತಿಂಗಳಿನವರೆಗೂ ಕೃಷಿ ಮಾಡುತ್ತಿದ್ದೇವು. ವಿವಿಧ ರೀತಿಯ ತರಕಾರಿ, ಹಣ್ಣು, ಹೂವು ಬೆಳೆದು ಜೀವನ ಬಂಡಿ ಸಾಗಿಸುತ್ತಿದ್ದೆವು. ಯಾರ ಹಂಗು ಇಲ್ಲದೆ ಬದುಕುತ್ತಿದ್ದೇವು. ಲಕ್ಷಾಂತರ ಹಣ ಅಲ್ಲದಿದ್ದರು ಕೃಷಿಯಿಂದ ಒಂದಷ್ಟು ಹಣ ಸಂಪಾದನೆಯಾಗುತ್ತಿತ್ತು. ಜೀವನ ನಿರ್ವಹಣೆಗಂತೂ ಯಾವುದೇ ತೊಂದರೆ ಇರಲಿಲ್ಲ.
ಆದರೆ ಈಗ ಕೊಳವೆ ಬಾವಿ ಬತ್ತಿ ಹೋಗಿದೆ. ಹನಿ ನೀರು ಬರುತ್ತಿಲ್ಲ, ಏನು ಮಾಡುವುದೆಂದು ಅರ್ಥವಾಗುತ್ತಿಲ್ಲ. ಆದ್ದರಿಂದ ಮೊಬೈಲ್ ರಿಪೇರಿ ತರಬೇತಿ ಪಡೆದರೆ ನಗರದಲ್ಲಿ ಮೊಬೈಲ್ ಅಂಗಡಿ ಹಾಕಿಕೊಂಡು ಸ್ವ ಉದ್ಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಇಲ್ಲ. ಸ್ವಂತ ಉದ್ಯೋಗದತ್ತ ಒಲವಿರುವುದರಿಂದ ತರಬೇತಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ.
ಆ ಕ್ಷಣ ನನಗನ್ನಿಸಿದ್ದುಇಡೀ ದೇಶದಲ್ಲಿ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವ ಶಕ್ತಿ ಇರುವುದು ಕೃಷಿಗೆ ಮಾತ್ರ. ಕೈಗಾರಿಕೆ, ಸೇವಾ ವಲಯ, ಸರಕಾರಿ ರಂಗ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಉದ್ಯೋಗ ಸೃಷ್ಟಿಸುತ್ತದೆ. ಎಷ್ಟೇ ಕೈಗಾರಿಕಾ ಪ್ರದೇಶಗಳನ್ನು ರಚಿಸಿದರು ಬೆರಳಣಿಕೆಯಷ್ಟು ಮಂದಿಗೆ ಮಾತ್ರ ಉದ್ಯೋಗ ಒದಗಿಸಲು ಸಾಧ್ಯ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೃಷಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತದೆ.
ವಿಪರ್ಯಾಸವೆಂದರೆ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವ ಕೃಷಿ ಕ್ಷೇತ್ರದ ಉಳಿವಿಗಾಗಿ ಯಾರೊಬ್ಬರು ಪ್ರಯತ್ನ ಮಾಡದಿರುವುದು ದುರಂತ. ಅದರಲ್ಲೂ ದೇಶದ ಬರ ಪೀಡಿತ ಜಿಲ್ಲೆಯಗಳಲ್ಲಿ ಅನಿವಾರ್ಯವಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದರಿಂದ ನಿರುದ್ಯೋಗಿಗಳ ಪ್ರಮಾಣ ಗಣನೀಯವಾಗಿ ಏರಿಕೆಯಯಾಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಉದಾಹರಣೆಗೆ ಅವಿಭಜಿತ ಕೋಲಾರ ಜಿಲ್ಲೆಯ ಸಾವಿರಾರು ಜನರು ಇಂದು ಉದ್ಯೋಗ ಹರಿಸಿ ನಗರಗಳತ್ತ ವಲಸೆ ಹೋಗುತ್ತಿರುವುದು ಪ್ರತಿನಿತ್ಯವು ಕಾಣುತ್ತಿದ್ದೇವೆ.
ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿದ್ದಾಗ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕೃಷಿಯತ್ತ ಚಿತ್ತ ಹರಿಸಿ, ಶ್ರಮ ವಹಿಸಿ ದುಡಿದು, ಜೀವನ ಸಾಗಿಸುತ್ತಿದ್ದರು. ಆದರೆ ಇಂದು ದುಡಿಯಲು ದೈಹಿಕವಾಗಿ ಶಕ್ತಿ ಇದ್ದರೂ ಕೆಲಸವಿಲ್ಲದಾಗಿದೆ.
ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿದ್ದಾಗ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕೃಷಿಯತ್ತ ಚಿತ್ತ ಹರಿಸಿ, ಶ್ರಮ ವಹಿಸಿ ದುಡಿದು, ಜೀವನ ಸಾಗಿಸುತ್ತಿದ್ದರು. ಆದರೆ ಇಂದು ದುಡಿಯಲು ದೈಹಿಕವಾಗಿ ಶಕ್ತಿ ಇದ್ದರೂ ಕೆಲಸವಿಲ್ಲದಾಗಿದೆ.
ನಮ್ಮ ತರಬೇತಿ ಸಂಸ್ಥೆಗೆ ಬರುವ ವಿವಿಧ ತರಬೇತಿಗಳ ಶಿಬಿರಾರ್ಥಿ ಗಳನ್ನು ಅವಿಭಜಿತ ಕೋಲಾರ ಜಿಲ್ಲೆಯ ಇತಿಹಾಸದ ಬಗ್ಗೆ ಒಂದೆರೆಡು ಮಾತು ಹೇಳಿ ಎಂದಾಗ ಪ್ರಪಂಚದಲ್ಲೇ ಆಳವಾದ ಚಿನ್ನದ ಗಣಿ ಪ್ರದೇಶ ನಮ್ಮ ಕೆ.ಜಿ.ಎಫ್ ನಲ್ಲೇ ಇತ್ತು. ರಾಜ್ಯದಲ್ಲಿಯೇ ಅತಿ ಹೆಚ್ಚು ಟಮೋಟ ಹಣ್ಣನ್ನು ಬೆಳೆಯುವ ಹೆಗ್ಗಳಿಕೆ ನಮ್ಮದು. ಮಾವು, ಹಾಲು ಉತ್ಪಾದನೆಯಲ್ಲೂ ಗಣನೀಯ ಸಾಧನೆ ಮಾಡಿದ್ದವು. ವಿವಿಧ ಜಾತಿಯ ಹೂ ಬೆಳೆಯುವಲ್ಲೂ ಫೇಮಸ್ ಎನ್ನುತ್ತಾರೆ. ಹಾಗೆಯೇ ಪ್ರಸ್ತುತ ಸನ್ನಿವೇಶದ ಬಗ್ಗೆ ವಿವರಿಸುತ್ತ ಜಿಲ್ಲೆಯ ಸ್ಥಿತಿಗತಿ ಹೇಳ ಬೇಕೆಂದರೆ ಬರ ಪೀಡಿತ ಜಿಲ್ಲೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಕೆರೆಗಳಿದ್ದರು, ಅವುಗಳಲ್ಲಿ ನೀರು ಮಾತ್ರ ಇಲ್ಲ. ಮಳೆಯ ಕೊರತೆ ಜಿಲ್ಲೆ. ಕೃಷಿಯತ್ತ ನೋಡಲು ಹಿಂಜರಿಯುತ್ತಿರುವ ರೈತರು ಸಮೂಹದ ಚಿತ್ರಣ, ಉದ್ಯೋಗ ಹುಡುಕುತ್ತ ನಗರಗಳಿಗೆ ತೆರಳುತ್ತಿರುವ ಜನ, ಈಗೆ ಇಂದು ಜಿಲ್ಲೆಯು ಗೋಚರಿಸುತ್ತದೆ ಎಂದು ಬಹಳ ನೋವಿನಿಂದಲೇ ತರಬೇತಿಗೆ ಬಂದವರು ವ್ಯಾಖ್ಯಾನಿಸುತ್ತಾರೆ.
ಹಾಗೆ ನೋಡಿದರೆ ಇದು ಕೇವಲ ಕೋಲಾರ ಜಿಲ್ಲೆಯ ಒಂದರ ಕಥೆ ಮಾತ್ರವಲ್ಲ, ದೇಶದ ಹಲವು ಭಾಗಗಳಲ್ಲಿ ಮಳೆಯು ತೀವ್ರವಾಗಿ ಕೊರತೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ನೀರಾವರಿ ಪ್ರದೇಶ ಬಹಳ ಇಳಿಮುಖವಾಗುತ್ತಿದೆ. ಕೃಷಿ ಮಾಡುವವರ ಸಂಖ್ಯೆಯು ನಿಧಾನವವಾಗಿ ಇಳಿಕೆಯಾಗುತ್ತಿದೆ. ಇದರ ನೇರ ಪರಿಣಾಮ ಈಗಾಗಲೇ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ಸರಕಾರಗಳು ಕೃಷಿ, ನೀರಾವರಿ ಸೌಲಭ್ಯಗಳಿಗೆ ಅನುದಾನ ಮೀಸಲಿಟ್ಟರು, ನಿರ್ದಿಷ್ಟ ಸಮಯದಲ್ಲಿ ಯಾವುದೇ ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ. ಇದಕ್ಕೆ ಉದಾಹರಣೆ ಕೋಲಾರ, ಮಾಲೂರು, ಬಂಗಾರಪೇಟೆ ಭಾಗಗಳಿಗೆ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜಾರಿಯಾಗಿದ್ದ ಯರಗೋಳ್ ಯೋಜನೆ. ಯೋಜನೆ ಪ್ರಾರಂಭವಾಗಿ ವರ್ಷಗಳೇ ಕಳೆದರೂ ಪೂರ್ಣ ಮಾತ್ರ ಆಗಿಲ್ಲ. ಇದಕ್ಕೆ ಶಾಸಕಾಂಗ ಮತ್ತು ಆಡಳಿತ ವರ್ಗದ ವೈಪಲ್ಯ ಅನ್ನದೇ ಮತ್ತೇನು ಹೇಳಲು ಸಾಧ್ಯ.
ಇನ್ನು ಜಿಲ್ಲೆಯ ಜನ ಆಕ್ರೋಶವನ್ನು ಕಡಿಮೆ ಮಾಡಲು ಕೆ.ಸಿ ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನ ಮಹಾನಗರ ಜನರು ಬಳಸಿ, ಉಪಯೋಗಿಸಿದ ಕೊಳಚೆ ನೀರನ್ನು, ಶುದ್ದಿಕರೀಸುವ ಮೂಲಕ ಜಿಲ್ಲೆಗೆ ಹರಿಸಲು ಸರಕಾರ ಸಿದ್ದವಾಗಿದೆ. ಬಾಯ್ತೆರೆದಿರುವ ಕೆರೆಗಳಿಗೆ ಈ ನೀರು ಹರಿದರೆ ಅಂತರ್ಜಲ ಮಟ್ಟ ಏರಿಕೆಯಾಗಿ ನಿಂತು ಹೋಗಿರುವ ಕೊಳವೆ ಬಾವಿಗಳು ಪುನರ್ಜನಮ ಪಡೆದುಕೊಳ್ಳುತ್ತದೆ ಎಂಬುವುದು ಸರಕಾರದ ವಾದ. ಇದೆಷ್ಟರ ಮಟ್ಟಿಕೆ ಸಫಲವಾಗುತ್ತದೆ ಎಂದು ಕಾದು ನೋಡ ಬೇಕು.

ಇಸ್ರೇಲ್ ದೇಶದಲ್ಲಿ ನೀರಿನ ಪುನರ್ ಬಳಕೆ ಬಹಳ ಅಚ್ಚುಕಟ್ಟೆಯಾಗಿ ನಡೆಯುತ್ತದೆ. ಕೃಷಿಗೂ ಬಳಸಿದ ನೀರನ್ನೇ ಉಪಯೋಗಿಸುವ ಮೂಲಕ ಹೊಸ ಅನ್ವೇಷಣೆಯನ್ನು ಇಸ್ರೇಲ್ ದೇಶ ಮಾಡುತ್ತಿದೆ ಎಂದು ಆಗಾಗ ಪತ್ರಿಕೆಗಳಲ್ಲಿ ವರದಿಗಳು ಬರುತ್ತಲೇ ಇರುತ್ತವೆ. ಇಸ್ರೇಲ್ ನಲ್ಲಿ ಆಗುವ ಹೊಸ ಪ್ರಯತ್ನಗಳು ನಮ್ಮಲ್ಲೇಕೆ ಆಗುತ್ತಿಲ್ಲ ಎಂಬುವುದೇ ಯಕ್ಷ ಪ್ರಶ್ನೆ.. ಒಂದು ಸಣ್ಣ ಬೆಂಕಿ ಪೊಟ್ಟಣಕ್ಕೂ ಅದನ್ನು ತಯಾರಿಸಿದ ಕಂಪನಿಗಳು ಬೆಲೆ ನಿಗದಿಪಡಿಸಿ, ಮಾರಾಟ ಮಾಡಿ ಲಾಭಗಳಿಸುತ್ತದೆ. ಆದರೆ ಬಿಸಿಲು, ಮಳೆ ಎನ್ನದೇ ಹೊಲ, ಗದ್ದೆಗಳಲ್ಲಿ ದುಡಿದು ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿದರು, ಅದರ ಬೆಲೆ ನಿಗದಿಪಡಿಸುವ ಹಕ್ಕು ರೈತರಿಗಿಲ್ಲ. ಮಾರುಕಟ್ಟೆಯಲ್ಲಿ ನಿಗದಿಯಾಗಿರುವ ದರಕ್ಕೆ ಅದು ಲಾಭವೋ, ನಷ್ಟವೋ ಮಾರಾಟ ಮಾಡಬೇಕಾದ ಅನಿವಾರ್ಯತೆ ರೈತನಿಗಿದೆ.
ನಮ್ಮ ಬಳಿ ಎಷ್ಟೇ ಹಣವಿದ್ದರೂ ಅದನ್ನು ಊಟವೆಂದು ಭಾವಿಸಿ ತಿನ್ನಲು ಸಾಧ್ಯವಿಲ್ಲ. ಆತ ಬಡವ, ಶ್ರೀಮಂತನಾಗಿರಲಿ ಹಸಿದಾಗ ಊಟ ಮಾಡಲೇ ಬೇಕು. ರೈತರು ದುಡಿಯಿದ್ದಿದರೆ ಆಹಾರ ಪದಾರ್ಥಗಳು ಎಲ್ಲಿಂದ ಬರುತ್ತವೆ.. ಆದರೂ ರೈತರ ಬೆವರ ಹನಿಗೆ ಬೆಲೆ ಇಲ್ಲ.
ಆಡಳಿತ ನಡೆಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೃಷಿ ಕ್ಷೇತ್ರದ ಅಭಿವೃದ್ದಿಗಾಗಿ ನಿರ್ದಿಷ್ಟವಾದ ಯೋಜನೆ ಹಾಗೂ ನೀತಿಯನ್ನು ಜಾರಿಗೊಳಿಸಿದಿದದ್ದರೆ ಅನ್ನದಾನತನ ಸ್ಥಿತಿ ಮತ್ತಷ್ಟು ದುಸ್ಥರವಾಗುತ್ತದೆ.
ಅನ್ನದಾತನ ಅಳಲು, ಆಕ್ರಂದನ ಆಳುವ ವರ್ಗಕ್ಕೆ ಯಾವಾಗ ಕೇಳುತ್ತೋ..?
ಅನ್ನದಾತನ ಅಳಲು, ಆಕ್ರಂದನ ಆಳುವ ವರ್ಗಕ್ಕೆ ಯಾವಾಗ ಕೇಳುತ್ತೋ..?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ